ತುಮಕೂರು: ಶೇ.82.11ರಷ್ಟು ಮತದಾನ; ಕಳೆದ ಬಾರಿಗಿಂತ ಶೇ13.02 ಹೆಚ್ಚಳ
ಮಧುಗಿರಿ ಹೆಚ್ಚು ಶೇ 85.51, ತು.ನಗರ ಕಡಿಮೆ ಶೇ 65.02 ಮತದಾನ

ತುಮಕೂರು,ಮೇ.13: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಮತದಾನದಲ್ಲಿ ಶೇ.82.11 ಮತ ಚಲಾವಣೆಯಾಗಿದ್ದು, 22,15,604 ಮತದಾರರಲ್ಲಿ 18,16,749 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 106972 ಗಂಡು ಮತ್ತು 106240 ಮಹಿಳಾ ಮತದಾರರು ಸೇರಿದಾಂತೆ ಒಟ್ಟು 2,13,214 ಮತದಾರಿದ್ದು, ಇವರಲ್ಲಿ 91329 ಪುರುಷ ಮತ್ತು 88,325 ಮಹಿಳಾ ಮತದಾರರು ಸೇರಿ 1,76,654 ಮತಚಲಾಯಿಸಿದ್ದು, ಶೇ 84.26ರಷ್ಟು ಮತದಾನವಾಗಿದೆ.
ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ 88,293 ಪುರುಷ ಮತ್ತು 92,527 ಮಹಿಳಾ ಮತದಾರರು ಸೇರಿದಂತೆ 1,81,471 ಮತದಾರರಿದ್ದು, ಇವರಲ್ಲಿ 75,797 ಪುರುಷ ಮತ್ತು 75,194 ಮಹಿಳಾ ಮತದಾರರು ಹಾಗೂ ಓರ್ವ ತೃತೀಯ ಲಿಂಗಿಯ ಮತದಾನ ಸೇರಿ ಒಟ್ಟು 1,50,992 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.83.20ರಷ್ಟು ಮತ ಚಲಾವಣೆಯಾಗಿವೆ.
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ 90,824 ಪುರುಷ ಮತ್ತು 90,334 ಮಹಿಳಾ ಮತದಾರರು ಸೇರಿ ಒಟ್ಟು 1,81,166 ಮತದಾರರಿದ್ದು, ಇವರಲ್ಲಿ 77,872 ಪುರುಷ ಮತ್ತು 75,128 ಮಹಿಳಾ ಮತದಾರರು ಸೇರಿ ಶೇ.84.43 ಮತಗಳು ಚಲಾವಣೆಯಾಗಿವೆ.
ಕುಣಿಗಲ್ ವಿಧಾನಸಭಾ ಕ್ಷೇತ್ರದ 96,454 ಪುರುಷ ಮತ್ತು 93,892 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,90,363 ಮತದಾರರಿದ್ದು,1,61,418 ಪುರುಷ ಮತ್ತು 78,691 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,61,418 ಜನರು ತಮ್ಮ ಹಕ್ಕು ಚಲಾಯಸಿದ್ದು, ಶೇ 83.81 ಮತಗಳು ಚಲಾವಣೆಗೊಂಡಿವೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 1,28,883 ಪುರುಷ ಮತ್ತು 1,30,597 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,59,514 ಮತದಾರರಿದ್ದು, ಇವುಗಳಲ್ಲಿ 83,900 ಪುರುಷ ಮತ್ತು 84218 ಮಹಿಳಾ ಮತದಾರರು ಸೇರಿ ಒಟ್ಟು 1,68,118 ಮತಗಳು ಚಲಾವಣೆಯಾಗಿದ್ದು ಶೇ.65.02 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 1,00,996 ಪುರುಷ ಮತ್ತು 1,00,681 ಮಹಿಳಾ ಮತದಾರರು ಸೇರಿ 2,01,701 ಮತದಾರರಿದ್ದು, ಇವರಲ್ಲಿ 87,047 ಪುರುಷ ಮತ್ತು 84,416 ಮಹಿಳಾ ಮತದಾರರು ಸೇರಿ ಒಟ್ಟು 1,71,466 ಮತದಾರರು ಮತ ಚಲಾಯಿಸಿದ್ದು, ಶೇ 85.01 ಜನರು ಮತ ಚಲಾಯಿಸಿದ್ದಾರೆ.
ಮೀಸಲು ಕ್ಷೇತ್ರವಾದ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 1,01,427 ಪುರುಷ ಮತ್ತು 1,00,787 ಮಹಿಳಾ ಮತದಾರರು ಸೇರಿದಂತೆ 2,02,236 ಮತದಾರರಿದ್ದು, ಇವರಲ್ಲಿ 86,801 ಪುರುಷ ಮತ್ತು 83,325 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,70,126 ಜನರು ಮತಚಲಾಯಿಸಿದ್ದು, ಶೇ 84.12 ರಷ್ಟು ಮತಗಳು ಚಲಾವಣೆಯಾಗಿವೆ.
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 92,094 ಪುರುಷ ಮತ್ತು 90,748 ಮಹಿಳಾ ಮತದಾರರು ಸೇರಿ 1,82,861 ಮತದಾರರಿದ್ದು, ಇವರಲ್ಲಿ 79318 ಪುರುಷ ಮತ್ತು 75272 ಮಹಿಳಾ ಮತದಾರರು ಸೇರಿ ಒಟ್ಟು 154591 ಮತದಾರರು ಮತ ಚಲಾಯಿಸಿದ್ದು, ಶೇ 84.54 ರಷ್ಟು ಮತಗಳು ಚಲಾವಣೆಗೊಂಡಿವೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 1,09,054 ಪುರುಷ ಮತ್ತು 1,03,555 ಮಹಿಳಾ ಮತದಾರರು ಸೇರಿ 2,12,622 ಮತದಾರರಿದ್ದು, ಇವರಲ್ಲಿ 92,900 ಪುರುಷ ಮತ್ತು 86,897 ಮಹಿಳಾ ಮತದಾರರು ಸೇರಿ ಒಟ್ಟು 1,97,797 ಮತದಾರರು ಮತ ಚಲಾಯಿಸಿದ್ದು, ಶೇ 84.56 ರಷ್ಟು ಜನರು ಮತ ಚಲಾಯಿಸಿದ್ದಾರೆ.
ಪಾವಗಡ ವೀಸಲು ವಿಧಾನಸಭಾ ಕ್ಷೇತ್ರದಲ್ಲಿ 101045 ಪುರುಷ ಮತ್ತು 96133 ಮಹಿಳಾ ಮತದಾರರು ಸೇರಿ 197183 ಮತದಾರರಿದ್ದು, ಇವರಲ್ಲಿ 83909 ಪುರುಷ ಮತ್ತು 78407 ಮಹಿಳಾ ಮತದಾರರು ಸೇರಿ 1,62,317 ಮತದಾರರು ಮತ ಚಲಾಯಿಸಿದ್ದು, ಶೇ 82.32ರಷ್ಟು ಮತಗಳು ಚಲಾವಣೆಯಾಗಿವೆ.
ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 97754 ಪುರುಷ ಮತ್ತು 95516 ಮಹಿಳಾ ಮತದಾರರು ಸೇರಿ ಒಟಟು 193273 ಮತದಾರರಿದ್ದು, ಇವರಲ್ಲಿ 84553 ಪುರುಷ ಮತ್ತು 80717 ಮಹಿಳಾ ಮತದಾರರು ಸೇರಿ 165270 ಮತದಾರರು ಮತ ಚಲಾವಣೆ ಮಾಡಿದ್ದು,ಶೇ 85.51ರಷ್ಟು ಮತಚಲಾವಣೆಯಾಗಿವೆ.
2013ರಲ್ಲಿ ನಡೆದ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ 13.02ರಷ್ಟು ಮತಗಳು ಹೆಚ್ಚಾಗಿ ಚಲಾವಣೆಯಾಗಿವೆ.







