ಚಿಕ್ಕಮಗಳೂರು: ಶೇಕಡಾ 78.12 ರಷ್ಟು ಮತದಾನ
ಶೃಂಗೇರಿ ಕ್ಷೇತ್ರದಲ್ಲಿ ಅತೀ ಹೆಚ್ಚು

ಚಿಕ್ಕಮಗಳೂರು: ಮೇ.12 ರಂದು ಶನಿವಾರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ ಶೇ.78.12ರಷ್ಟು ಮತದಾನವಾಗಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.73.67ರಷ್ಟು ಮತದಾನವಾಗಿದೆ. ಒಟ್ಟು 21,6230 ಮತದಾರರ ಪೈಕಿ 59,396 ಮತದಾರು ಮತಚಲಾಯಿಸಿದ್ದಾರೆ. ಕ್ಷೇತ್ರದ 251 ಮತಗಟ್ಟೆಗಳಲ್ಲಿ 80,241 ಪುರುಷರು ಹಾಗೂ 79,137 ಮಹಿಳೆಯರು ಮತ ಚಲಾಯಿಸಿದ್ದಾರೆ.
ತರೀಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.81.7 ರಷ್ಟು ಮತದಾನವಾಗಿದೆ. 18,2853 ಮತದಾರರ ಪೈಕಿ 14,8152 ಮತದಾರರು ಮತಚಲಾಯಿಸಿದ್ದಾರೆ. ಕ್ಷೇತ್ರದಲ್ಲಿನ 231 ಮತಗಟ್ಟೆಗಳಲ್ಲಿ 75,616 ಪುರುಷರು, 72,629 ಮಹಿಳೆಯರು ಮತ ಚಲಾಯಿಸಿದ್ದಾರೆ.
ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.78.14 ರಷ್ಟು ಮತದಾನವಾಗಿದೆ. 20,1840 ಮತದಾರರ ಪೈಕಿ 15,7723 ಮತದಾರರು ಮತ ಚಲಾಯಿಸಿದ್ದಾರೆ. ಪೈಕಿ 244 ಮತಗಟ್ಟೆಗಳಲ್ಲಿ 80,452 ಪುರುಷರು. 77,161 ಮಹಿಳೆಯರು ಮತ ಚಲಾಯಿಸಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.82.02 ರಷ್ಟು ಮತದಾನವಾಗಿದೆ. 1,66026 ಮತದಾರರ ಪೈಕಿ 13,6167 ಮತದಾರರು ಮತಚಲಾಯಿಸಿದ್ದು, 254 ಮತಗಟ್ಟೆಗಳಲ್ಲಿ 67,770 ಪುರುಷರು, 68,405 ಮಹಿಳೆಯರು ಮತ ಚಲಾಯಿಸಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ. 76.79 ರಷ್ಟು ಮತದಾನವಾಗಿದೆ. 170250 ಮತದಾರರ ಪೈಕಿ 130909 ಮತದಾರರು ಮತ ಚಲಾಯಿಸಿದ್ದಾರೆ. 230 ಮತಗಟ್ಟೆಗಳಲ್ಲಿ 65,705 ಪುರುಷರು, 65,348 ಮಹಿಳೆಯರು ಮತ ಚಲಾಯಿಸಿದ್ದಾರೆ.
2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಿಂದ ಶೇ.75.47ರಷ್ಟು ಮತದಾನವಾಗಿತ್ತು. 2018ರ ಮೇ.12 ರಂದು ನಡೆದ ಚುನಾವಣೆಯಲ್ಲಿ ಶೇ.78.12ರಷ್ಟು ಮತದಾನವಾಗುವುದರೊಂದಿಗೆ ಶೇ.3ರಷ್ಟು ಮತದಾನ ಹೆಚ್ಚಳಗೊಂಡಿದೆ. ಹಿಂದಿನ ಚುನಾವಣೆಗಳಲ್ಲಿ ಮಹಿಳಾ ಮತದಾರರಿಂದ ಕಡಿಮೆ ಮತದಾನ ನಡೆಯುತ್ತಿದ್ದುದು ಜಿಲ್ಲೆಯಲ್ಲಿ ವಾಡಿಕೆ. ಆದರೆ ಕೆಲ ಬೂತ್‍ಗಳಲ್ಲಿ ಪುರುಷರಿಗಿಂದ ಮಹಿಳಾ ಮತದಾರರು ಹೆಚ್ಚು ಮತಚಲಾಯಿಸಿದ್ದಾರೆ. ಒಟ್ಟಾರೆ ಮಹಿಳಾ ಮತದಾರರು ಈ ಬಾರಿ ಪುರುಷರಿಗೆ ಸಮನಾಗಿ ಮತದಾನ ಮಾಡಿದ್ದಾರೆ.







