ಭಾರತೀಯ ಸೇನೆಯಿಂದ ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಪರೀಕ್ಷೆ: ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕ ಬಳಸಿದ ಪರಿಕಲ್ಪನೆ

ಜೈಪುರ, ಮೇ 13: ವಿಯೆಟ್ನಾಂ ಯುದ್ಧದ ಸಂದರ್ಭ ಶತ್ರು ಸೇನಾ ಪಡೆಯನ್ನು ಪತ್ತೆ ಮಾಡಲು ಹಾಗೂ ದಾಳಿ ನಡೆಸಲು ಅಮೆರಿಕದ ಸೇನೆ ಬಳಸಿದ ‘ವಾಯು ಅಶ್ವದಳ’ ಎಂಬ ಸೇನಾ ಪರಿಕಲ್ಪನೆಯನ್ನು ಭಾರತದ ಸೇನೆ ರಾಜಸ್ಥಾನದ ಮರು ಭೂಮಿಯಲ್ಲ್ಲಿ ಪರಿಶೀಲನೆ ನಡೆಸಿತು.
ತನ್ನ ರಕ್ಷಣಾ ಸಾಮರ್ಥ್ಯ ಬಲಗೊಳಿಸಲು ಸೇನೆ ಈ ಪರಿಕಲ್ಪನೆ ಪರಿಶೀಲಿಸಿದೆ. ಶಸ್ತ್ರಸಜ್ಜಿತ ಹೆಲಿಕಾಪ್ಟರ್‌ಗಳು ಟ್ಯಾಂಕ್ ಹಾಗೂ ಯಾಂತ್ರೀಕೃತ ಸೇನಾ ಪಡೆಗಳ ಸಮನ್ವಯದೊಂದಿಗೆ ಶತ್ರುಗಳ ವಿರುದ್ಧ ಸಂಯೋಜಿತ ದಾಳಿ ನಡೆಸುತ್ತದೆ. ದಾಳಿ ಹೆಲಿಕಾಪ್ಟರ್‌ಗಳನ್ನು ಹೊಂದುವ ಮೂಲಕ ತನ್ನ ವಾಯು ದಾಳಿಯ ವಿಮಾನಗಳನ್ನು ಸಬಲಗೊಳಿಸುವ ಗುರಿ ಹೊಂದಿರುವ ಭಾರತೀಯ ಸೇನೆ ಈ ಪರೀಕ್ಷೆ ನಡೆಸಿದೆ. ಭಾರತೀಯ ಸೇನೆಗೆ ಇದು ಹೊಸ ಪರಿಕಲ್ಪನೆ. ಭೂಸೇನೆಯ ಟ್ಯಾಂಕ್ ಹಾಗೂ ವಿಮಾನಗಳ ಸಮನ್ವಯತೆ ಮೂಲಕ ಆಕ್ರಮಣ ನಡೆಸಿ ಶತ್ರುಗಳನ್ನು ಸೋಲಿಸುವ ಮೂಲಕ ನೆಲದಲ್ಲಿ ನಡೆಯುವ ಯುದ್ಧವನ್ನು ಮರು ರೂಪಿಸುವ ಗುರಿಯನ್ನು ಭಾರತೀಯ ಈ ನೂತನ ಪರಿಕಲ್ಪನೆ ಹೊಂದಿದೆ. ವಿಸ್ತೃತ ವಿವೇಚನೆ, ಸ್ಯಾಂಡ್ ಮಾಡೆಲ್ ಚರ್ಚೆ ಹಾಗೂ ವಾರ್ ಗೇಮಿಂಗ್ ಬಳಿಕ ಈ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.





