ಮಲಾರ್: ಇಮಾಮ್ಸ್ ಕೌನ್ಸಿಲ್ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು, ಮೇ 14: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದಕ ಜಿಲ್ಲೆ ಮತ್ತು ಯನೆಪೊಯ ಆಸ್ಪತ್ರೆ ಇದರ ಸಹಯೋಗದಲ್ಲಿ ಮಲಾರ್ ಶಾಲೆಯಲ್ಲಿ ರವಿವಾರ ರಕ್ತದಾನ ಶಿಬಿರ ನಡೆಸಲಾಯಿತು.
ಇಮಾಮ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದ ನೇತೃತ್ವ ವಹಿಸಿ ಮಾತನಾಡಿದ ಇಮಾಮ್ಸ್ ಕೌನ್ಸಿಲ್ ದ.ಕ. ಜಿಲ್ಲಾಧ್ಯಕ್ಷ ಉಸ್ತಾದ್ ರಫೀಕ್ ದಾರಿಮಿ ರಕ್ತ ದಾನವೂ ಜೀವ ದಾನಕ್ಕೆ ಸಮವಾಗಿದ್ದು ರಕ್ತ ದಾನಿಗಳ ಕೊರತೆಯಿಂದ ರಕ್ತದ ಕೊರತೆ ಉಂಟಾಗಿ ದೇಶದಲ್ಲಿ ಸಾವಿರಾರು ಮಂದಿ ಮೃತರಾಗುತ್ತಿದ್ದಾರೆ. ಉಲಮಾಗಳು ಸಮಾಜದೊಂದಿಗೆ ಬೆರೆತು ಉತ್ತಮ ಸಮಾಜದ ವಾಹಕರಾಗಿ ಸಮಾಜಕ್ಕೆ ಮಾದರಿಯಾಗಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಇಮಾಮ್ಸ್ ಕೌನ್ಸಿಲ್ ಉಲಮಾಗಳ ಈ ರಕ್ತ ದಾನ ಶಿಬಿರ ಸಮುದಾಯಕ್ಕೆ ಉತ್ತಮ ಸಂದೇಶವಾಗಿದೆ ಎಂದು ಹೇಳಿದರು.
ಯನೆಪೊಯ ಆಸ್ಪತ್ರೆ ವೈದ್ಯೆ ಡಾ. ಶಬಾ , ಪಿಎಫ್ ಐ ನಾಯಕರಾದ ಯುಬಿ ಸಿದ್ದೀಕ್, ಸೈಯದ್ ದೇರಳಕಟ್ಟೆ, ಅರಸ್ತಾನ ಕತೀಬ್ ರಿಯಾಝ್ ಫೈಝಿ, ನಾಸಿರ್ ಮಲಾರ್ ಶುಭ ಹಾರೈಸಿ ಮಾತನಾಡಿದರು. ಝಾಹಿದ್ ಮಲಾರ್ ಸ್ವಾಗತಿಸಿ, ಹಮೀದ್ ವಂದಿಸಿದರು.





