ಸನ್ಮಾರ್ಗ: ರಮಝಾನ್ ವಿಶೇಷಾಂಕದಲ್ಲಿ ಕುರ್ ಆನ್ ಸ್ಪರ್ಧೆ
ಮಂಗಳೂರು, ಮೇ 14: ಮೇ 9ರಂದು ಬಿಡುಗಡೆಯಾದ ಸನ್ಮಾರ್ಗ ರಮಝಾನ್ ವಿಶೇಷಾಂಕದಲ್ಲಿ ಸತತ ಮೂರನೇ ಬಾರಿ ಕುರ್ ಆನ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪವಿತ್ರ ಕುರ್ ಆನ್ನ ಅಲ್ ಮಾಇದ ಮತ್ತು ಅಲ್ ಅನ್‍ಆಮ್ ಅಧ್ಯಾಯಗಳಿಗೆ ಸಂಬಂಧಿಸಿ ಈ ಸ್ಪರ್ಧೆ ನಡೆಯಲಿದ್ದು, ಶಾಲಾ ಪ್ರಶ್ನೆ ಪತ್ರಿಕೆಯ ಮಾದರಿಯಲ್ಲಿ ಇದನ್ನು ತಯಾರಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರೂ. 5000, ದ್ವಿತೀಯ ರೂ. 3000, ತೃತೀಯ ರೂ. 2000 ಮತ್ತು 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯ ನಿಯಮಗಳು ಪ್ರಶ್ನೆಪತ್ರಿಕೆಯಲ್ಲಿವೆ.
ಸನ್ಮಾರ್ಗ ವೆಬ್ಸೈಟ್ www.sanmarga.com ನ ಮೂಲಕವೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ವಾಟ್ಸ್ಆ್ಯಪ್ ಮೂಲಕವೂ ಉತ್ತರ ಕಳುಹಿಸಬಹುದು.
ಸ್ಪರ್ಧೆಯ ನಿಯಮ ಮತ್ತಿತರ ಮಾಹಿತಿಗಳಿಗಾಗಿ ಈಗಾಗಲೇ ಮಾರುಕಟ್ಟೆಯಲ್ಲಿರುವ ಸನ್ಮಾರ್ಗ ಪತ್ರಿಕೆಯನ್ನು ಖರೀದಿಸಿ ಅಥವಾ www.sanmarga.com ವೆಬ್ ಸೈಟ್ ಗೆ ಭೇಟಿ ನೀಡಬಹುದು. 0824-2422786, 9880096128 ವಿವರಗಳಿಗಾಗಿ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





