ಒಂತಿಬೆಟ್ಟು: ವಿದ್ಯಾರ್ಥಿನಿಗೆ ಮನೆ ಹಸ್ತಾಂತರ

ಉಡುಪಿ, ಮೇ 14: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ವಿದ್ಯಾ ಪೋಷಕ್ ಫಲಾನುಭವಿ ವಿದ್ಯಾರ್ಥಿನಿ ಸುಶ್ಮಿತಾಳಿಗೆ ಓಂತಿಬೆಟ್ಟಿನಲ್ಲಿ ನಿರ್ಮಿಸಲು ಆಂಶಿಕ ಆರ್ಥಿಕ ಸಹಾಯ ಮಾಡಿದ ಮನೆಯ ಹಸ್ತಾಂತರ ಕಾರ್ಯಕ್ರಮ ಮೇ 13ರಂದು ಜರಗಿತು.
ಉಡುಪಿಯ ಉದ್ಯಮಿ ಯು.ವಿಶ್ವನಾಥ ಶೆಣೈ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ದರು. ಮನೆ ಕಟ್ಟಿಕೊಳ್ಳಲು ಜಾಗ ನೀಡಿದ ಸುಂದರಿ ಶೆಟ್ಟಿ ಇವರನ್ನು ಗೌರವಿಸ ಲಾಯಿತು. ಸುಶ್ಮಿತಾ ಮತ್ತು ಅವಳ ತಾಯಿ ಸುನೀತಾ ಸಂಸ್ಥೆಯ ಸಹಾಯವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷ ಕೆ.ಗಣೇಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ದರು. ಉಪಾಧ್ಯಕ್ಷ ಎಂ.ಗಂಗಾಧರ ರಾವ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಇದು ಸಂಸ್ಥೆ ಫಲಾನುಭವಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಿದ 12ನೆ ಮನೆಯಾಗಿದೆ.
Next Story





