ಕೊಡಂಕೂರು ಸಂಸ್ಕೃತ ವಿದ್ಯಾಪೀಠಕ್ಕೆ ಅರ್ಜಿ ಆಹ್ವಾನ
ಉಡುಪಿ, ಮೇ 14: ಕೊಡಂಕೂರಿನ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದ 2018-19ನೆ ಸಾಲಿನ ಪ್ರವೇಶಕ್ಕೆ ಎಸೆಸೆಲ್ಸಿ ಪರೀಕ್ಷೆ ಉತ್ತೀರ್ಣರಾಗಿರುವ, ಬ್ರಹ್ಮೋಪದೇಶ ಹೊಂದಿರುವ ವಿಶ್ವಬ್ರಾಹ್ಮಣ ಸಮಾಜ ವಿದ್ಯಾರ್ಥಿಗಳು ಅರ್ಜಿ ಆಹ್ವಾನಿಸಲಾಗಿದೆ.
ಊಟ, ವಸತಿ, ಉಪಹಾರ, ಸಮವಸ್ತ್ರಗಳು ಉಚಿತ. 5 ವರ್ಷಗಳ ಅಧ್ಯಯನ ಪೂರೈಸಿದ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗದ ಭರವಸೆ ಇದೆ. ಪ್ರತಿವರ್ಷ 10 ವಿದ್ಯಾರ್ಥಿಗಳನ್ನು ಮಾತ್ರ ಆಯ್ದು ಸೇರಿಸಿಕೊಳ್ಳುವುದರಿಂದ ಅರ್ಹ ಆಸಕ್ತರು ಪೋಷಕರ ಜೊತೆಗೂಡಿ ಜೂನ್ ತಿಂಗಳ ಮೊದಲ ವಾರದಲ್ಲಿ ವಿದ್ಯಾಪೀಠಕ್ಕೆ ಬಂದು ಪ್ರಾಂಶುಪಾಲರನ್ನು ಬೇಟಿಯಾಗಿ ಅರ್ಜಿ ಸಲ್ಲಿಸಬೇಕೆಂದು ವಿದ್ಯಾಪೀಠದ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





