ಮಂಗಳೂರು: ಮೇ 20ರಂದು ರೋಟರಾಕ್ಟ್ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ
ಮಂಗಳೂರು, ಮೇ 14: ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ರೋಟರಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಾಕ್ಟ್ ಜಿಲ್ಲಾ ಮಟ್ಟದ 12ನೆ ವಾರ್ಷಿಕ ದಿ.ರೋ. ಶಾಂತರಾಮ ವಾಮಂಜೂರು ಸ್ಮಾರಕ ‘ಅಂತರ ರೋಟರಾಕ್ಟ್ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟ’ವನ್ನು ಮೇ 20ರಂದು ನಗರದ ವುಡ್‌ಲ್ಯಾಂಡ್ಸ್ ಹೊಟೇಲ್ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.
ಈ ಸ್ಪರ್ಧಾ ಕೂಟವು ಕೇವಲ ರೋಟರಾಕ್ಟ್ ಸಂಸ್ಥೆಯ ಸದಸ್ಯರಿಗೆ ಮಾತ್ರ ಸೀಮಿತವಾಗಿದ್ದು, ರೋಟರಾಕ್ಟ್ ಸಂಸ್ಥೆಯ ಆಡಳಿತ ವಿಷಯ, ವಿಜ್ಞಾನ ಮತ್ತು ಸೇವಾ ಚಟುವಟಿಕೆಗಳ ಬಗ್ಗೆ ಜರಗಿಸಲಾಗುವುದು.ಪಣಂಬೂರು ಕರಾವಳಿ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ರೋಟರಾಕ್ಟ್ ಸಂಸ್ಥೆಯ ಜಿಲ್ಲಾಧ್ಯಕ್ಷ ರೋ. ಯತೀಶ್ ಬೈಕಂಪಾಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಿದ್ದಾರೆ.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ರೋ. ರೇಮಂಡ್ ಡಿಕುನ್ಹಾ ಅವರು ಗೌರವ ಅತಿಥಿಯಾಗಿ ಪಾಲ್ಗೊಳಲಿದ್ದಾರೆ. ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷೆ ರೋ. ಪವಿತ್ರ ಆಚಾರ್ಯ ಅಧ್ಯಕ್ಷತೆ ವಸಲಿದ್ದಾರೆ. ರೋ. ಡಾ. ದೇವದಾಸ್ ರೈ ಅವರು ಸ್ಪರ್ಧಾ ಕೂಟವನ್ನು ನಿರೂಪಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 98450 81145ನ್ನು ಸಂಪರ್ಕಿಸಬಹುದು.ದಿ. ರೋ. ಶಾಂತರಾಮ ವಾಮಂಜೂರು ಅವರು 2006 ರಲ್ಲಿ ರೋಟರಾಕ್ಟ್ ಸಂಸ್ಥೆಯ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ದುರಾದೃಷ್ಟದಲ್ಲಿ ಆಕಸ್ಮಿಕ ರಸ್ತೆ ವಾಹನ ಅಪಘಾತದಲ್ಲಿ ಧಿವಶರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







