ಮೇ 16ರಂದು ಟೆಲಿಕಾಂ ಉದ್ಯಮದ ಬಗ್ಗೆ ಉಪನ್ಯಾಸ
ಮಂಗಳೂರು, ಮೇ 14: ನಗರದ ಬೊಂದೇಲ್‌ನಲ್ಲಿರುವ ಎಂ.ಎಸ್.ಎನ್.ಎಂ. ಬೆಸಂಟ್ ಸ್ನಾತಕೋತ್ತರ ಕಾಲೇಜಿನಲ್ಲಿ ಮೇ 16ರಂದು ಸಂಜೆ 3 ಗಂಟೆಗೆ ‘ಟೆಲಿಕಾಂ ಉದ್ಯಮ: ಸವಾಲುಗಳು ಮತ್ತು ನಿರೀಕ್ಷೆಗಳು’ ಎನ್ನುವ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಉಪನ್ಯಾಸವನ್ನು ಭಾರತಿ ಏರ್‌ಟೆಲ್ ಸಂಸ್ಥೆಯ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿರುವ ಗೋಪಾಲ್ ವಿಟ್ಟಲ್ ಅವರು ನಡೆಸಿಕೊಡಲಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಂತರ್ಜಾಲ ಬಳಕೆದಾರರೊಂದಿಗಿನ ಎರಡನೆಯ ಅತಿದೊಡ್ಡ ಟೆಲಿ ಕಮ್ಯುನಿಕೇಶನ್ ಮಾರುಕಟ್ಟೆ ಹೊಂದಿದ್ದು, ಈ ಉದ್ಯಮವು ಬೆಳವಣಿಗೆಗೆ ಅಪಾರ ಅವಕಾಶವನ್ನು ಹೊಂದಿದೆ. ಕಾರ್ಪೊರೇಟ್ ವಲಯಕ್ಕೆ ಮತ್ತು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಉಪಯುಕ್ತ ವಿಷಯವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಉಪನ್ಯಾಸವು ಮಣೇಲ್ ನಿವಾಸ ನಾಯಕ್ ವಿಜ್ಞಾನ ಮಾಲಿಕೆ ಎಂಬ ವಿಶೇಷ ಕಾರ್ಯಕ್ರಮದಡಿ ಏರ್ಪಡಿಸಲಾಗಿದೆ ಎಂದು ಕಾಲೇಜಿನ ನಿರ್ದೇಶಕ ಡಾ. ನಾರಾಯಣ ಕಾಯರ್‌ಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಮಳಿಗೆಯಿಂದ 6ನೆ ಸುತ್ತಿನ ಉಚಿತ ಪ್ರವಾಸದ ಅದೃಷ್ಟ ಚೀಟಿ ಯೋಜನೆ ವಿಜೇತರುಮಂಗಳೂರು,ಮೇ.14:ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ವತಿಯಿಂದ ನವದಂಪತಿಗಳಿಗೆ ಹಮ್ಮಿಕೊಂಡ ‘ಬ್ರೈಡ್ಸ್ ಆಫ್ ಇಂಡಿಯಾ ಕ್ಯಾಂಪೇನ್ ’ ಅದೃಷ್ಟ ಚೀಟಿ ಯೋಜನೆಯ ಆರನೆ ಸುತ್ತಿನಲ್ಲಿ ನವದಂಪತಿಗಳಿಗೆ ಹನಿಮೂನ್ ಪ್ರವಾಸದ ಉಚಿತ ಕೊಡುಗೆಗೆ ಆಯ್ಕೆ ಮಾಡಲಾಯಿತು.ರಾಜ್ಯ ವ್ಯಾಪ್ತಿಯಲ್ಲಿ ನಡೆದ ಈ ಅದೃಷ್ಟ ಚೀಟಿ ಯೋಜನೆಯಲ್ಲಿ 1000 ದಂಪತಿಗಳು ಉಚಿತ ಹನಿಮೂನ್ ಪ್ರವಾಸದ ಆಯ್ಕೆಯ ಅವಕಾಶ ಪಡೆಯಲಿದ್ದಾರೆ.6ನೆ ಸುತ್ತಿನ ಆಯ್ಕೆ ನಗರದ ಫಳ್ನಿರ್ ಮಲಬಾರ್ ಮಳಿಗೆಯಲ್ಲಿಂದು ನಡೆಯಿತು. ಅದೃಷ್ಟ ಕೂಪನ್ ಯೋಜನೆಯಲ್ಲಿ ಅಸ್ಮಾ ಬಾನು,ಸುಮಯ್ಯ,ಮುಹಮ್ಮದ್ ದಾವೂದ್,ಲಾರೆನ್ಸ್ ಕೊರ್ರೆ ಆಯ್ಕೆಯಾಗಿದ್ದಾರೆ.ಆಯ್ಕೆಯಾದ ದಂಪತಿಗಳಿಗೆ ದುಬಾ, ಮಲೇಶಿಯಾ, ಸಿಂಗಾಪುರ, ಬಾಲಿ,ಹಾಂಕಾಂಗ್ ಗೆ ಉಚಿತ ಪ್ರವಾಸದ ಅವಕಾಶ ಲಭಿಸಲಿದೆ.ಪ್ರಥಮ ಸುತ್ತಿನಲ್ಲಿ 175 ಮಂದಿ ಆಯ್ಕೆಯಾಗಿದ್ದಾರೆ.ಮನೆಯಾಗಿದ್ದಾರೆ.ಸಮಾರಂಭದ ಅತಿಥಿಗಳಾಗಿ ಆಗಮಿಸಿದ ಪ್ರದೀಪ್ ಶೆಟ್ಟಿ ಮತ್ತು ಸಂಧ್ಯಾ ಪಿ.ಶೆಟ್ಟಿ ಹಾಗೂ ಸ್ಟೋರ್ ಹೆಡ್ ಶರತ್ ಚಂದ್ರ ವಿಜೇತರಿಗೆ ಉಚಿತ ಪ್ರವಾಸದ ಕೂಪನ್ ವಿತರಿಸಿದರು.ವಿವಿಧ ಭಾರತೀಯ ಹಬ್ಬದಗಳ ಸಂದರ್ಭದಲ್ಲಿ ಹಾಗೂ ಮದುವೆ ಸಮಾರಂಭಕ್ಕೆ ಪೂರಕವಾಗಿ ಮಲಬಾರ್ ಚಿನ್ನ ಮತ್ತು ವಜ್ರಾಭರಣ ಮಳಿಗೆಗಳಲ್ಲಿ ವಧುವಿನ ಸಿಂಗಾರದ ಅಭರಣಗಳ ವಿಶೇಷ ಸಂಗ್ರಹ ಹೊಂದಿದೆ.ಭಾರತದಲ್ಲಿರುವ ಮಲಬಾರ್ ಚಿನ್ನ ಮತ್ತು ವಜ್ರಾಭರಣ ಮಳಿಗೆಗಳಲ್ಲಿ ಈ ಅವಕಾಶ 2018ರ ನವೆಂಬರ್ 30ರವರೆಗೆ ಗ್ರಾಹಕರಿಗೆ ಲಭಿಸಲಿದೆ(ತಮಿಳು ನಾಡು ಹೊರತು ಪಡಿಸಿ)ಎಂದು ಮಲಬಾರ್ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಶೋರಿನ್ ರಿಯೂ ಕರಾಟೆ ಸಾಧನೆ
ಮೂಡುಬಿದಿರೆ, ಮೇ.14: ಶ್ರೀಲಂಕಾದ ಕ್ಯಾಂಡಿಯ ಪೆರೆದೇನಿಯಾ ವಿ.ವಿ.ಯಲ್ಲಿ ಇತ್ತೀಚೆಗೆ ನಡೆದ 16 ನೇ ತೆನ್‌ಶಿನ್‌ಕಾನ್ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಶೋರಿನ್ ರಿಯೂ ಕರಾಟೆ ತಂಡವು 7 ಚಿನ್ನ, 7 ಬೆಳ್ಳಿ, 2 ಕಂಚಿನ ಪದಕಗಳೊಂದಿಗೆ ಅತ್ಯುತ್ತಮ ತಂಡ ಪ್ರಶಸ್ತಿ ಪಡೆಯಿತು.
ಪ್ರಖ್ಯಾತ್ ಪೂಜಾರಿ 2 ಚಿನ್ನ, ಮಹಮ್ಮದ್ ಅಸ್ಪಕ್ 2 ಬೆಳ್ಳಿ, ಮಹಮ್ಮದ್ ಇಪಾಜ್ 1 ಚಿನ್ನ, 1 ಕಂಚು, ಶೇಕ್ ಮಹಮ್ಮದ್ ಝಿಯಾದ್ 1 ಚಿನ್ನ, 1 ಬೆಳ್ಳಿ, ಮಹಮ್ಮದ್ ಶಯಾನ್ 1 ಚಿನ್ನ, 1 ಬೆಳ್ಳಿ, ಮಹಮ್ಮದ್ ಅಮನ್ 1 ಚಿನ್ನ, 1 ಬೆಳ್ಳಿ, ಮಹಮ್ಮದ್ ಶಾರೀಪ್ 1 ಚಿನ್ನ, 1 ಕಂಚು, ಅಬ್ದುಲ್ ಖಾದರ್ ಸುಹಾನ್ 2 ಬೆಳ್ಳಿ ಪದಕಗಳನ್ನು ಪಡೆದರು.
ಇವರಿಗೆ ಶಿಹಾನ್ ನದೀಮ್ ಶ್ರೀಲಂಕಾಕ್ಕೆ ತೆರಳಿ ಮಾರ್ಗದರ್ಶನ ನೀಡಿದ್ದರು.
ಚಿತ್ರ: 14 ಮೂಡ್ ಕರಾಟೆ.
ಮೇ.14-16: ತಿಂಗಳಾಡಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಮಾರಿಪೂಜೆ ಮಹೋತ್ಸವ
ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಗಾಂನಗರ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಮಾರಿಪೂಜೆ ಮಹೋತ್ಸವವು ಮೇ.14 ರಿಂದ ಆರಂಭಗೊಂಡು ಮೇ.16 ರತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮೇ.14 ರಂದು ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಶುದ್ಧಿ ಕಲಶ ಬಳಿಕ ಅನ್ನಸಂತರ್ಪಣೆ, ಸಂಜೆ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಂದರ ಸಿದ್ಯಾಳರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ರಾತ್ರಿ ಭಂಡಾರ ತೆಗೆಯುವುದು, ಭಂಡಾರ ಶುದ್ಧಿಗೊಳಿಸುವುದು, ಭಂಡಾರ ಉತ್ಸವ ಬಯಲಿದೆ ಕೊಂಡೊಯ್ಯುವುದು ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸವಿತಾ ಮ್ಯೂಸಿಕ್ ಪುತ್ತೂರು ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶ್ರೀ ದೇವಿಯ ಗುಡಿ ಪ್ರತಿಷ್ಠಾಪಿಸುವುದು ನಡೆದು ಗುಳಿಗ, ಪಂಜುರ್ಲಿ, ಕಲ್ಲುರ್ಟಿ, ಶನಿಗುಳಿಗ, ಕಾಳಭೈರವ ದೈವಗಳ ದರ್ಶನ ಮತ್ತು ತಂಬಿಲ ಸೇವೆ ನಡೆಯಲಿದೆ. ಮೇ.15 ರಂದು ಸೂರ್ಯೋದಯಕ್ಕೆ ಮೊದಲು ಮಾರಿ ಕಡಿಯುವುದು, ಮಧ್ಯಾಹ್ನ ಅಮ್ಮನವರ ದರ್ಶನ ಮತ್ತು ಇತರ ದೈವಗಳ ದರ್ಶನ, ಮಹಾಪೂಜೆ, ಹರಿಕೆ ಕಾಣಿಕೆ ಸ್ವೀಕಾರ ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೇವಾಲಯಕ್ಕೆ ಭಂಡಾರ ಕೊಂಡೊಯ್ಯುವ ಕಾರ್ಯಕ್ರಮ ನಡೆಯಲಿದೆ. ಮೇ.16 ರಂದು ಸೂರ್ಯೋದಕ್ಕೆ ಶ್ರೀ ದೇವಿಯ ಭಂಡಾರ ಪ್ರತಿಷ್ಠಾಪನೆ ನಡೆಯಲಿದೆ. ಭಕ್ತಾಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಮಾದಿಗ ತಿಳಿಸಿದ್ದಾರೆ.
ಮತದಾನದಲ್ಲಿ ಮಹಿಳೆಯರೇ ಮುಂದುಮಂಗಳೂರು, ಮೇ 14: ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 8,41,073 ಪುರುಷ ಹಾಗೂ 8,70,775 ಮಹಿಳೆಯರು ಸೇರಿ ಒಟ್ಟು 17,11,848 ಮತದಾರರಿದ್ದು, ಈ ಪೈಕಿ 6,48,234 ಪುರುಷರು ಹಾಗೂ 6,81,335 ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಪುರುಷರಿಂಗಿಂತ 33,101 ಹೆಚ್ಚು ಮಹಿಳೆಯರು ಮತವನ್ನು ಚಲಾಯಿಸಿದಂತಾಗಿದೆ. ಮಹಿಳೆಯರು ಶೇ. 78.24 ಮತದಾನ ಮಾಡಿದ್ದರೆ. ಪುರುಷರ ಶೇಕಡಾವಾರು 77.67 ಆಗಿದೆ.ತಾಲೂಕುವಾರು ಮತದಾನವನ್ನು ಗಮನಿಸಿದರೆ, ಬೆಳ್ತಂಗಡಿ (ಪುರುಷರು-ಶೇ. 81.55, ಮಹಿಳೆ-ಶೇ.81.45) ಮತ್ತು ಸುಳ್ಯ (ಪುರುಷ-ಶೇ.84.29, ಮಹಿಳೆ-ಶೇ. 83.67) ಎರಡು ಕ್ಷೇತ್ರಗಳಲ್ಲಿ ಮಹಿಳೆಯರಿಗಿಂತ ಪುರುಷ ಮತದಾನದ ಸಂಖ್ಯೆ ಹೆಚ್ಚಾಗಿದೆ. ಮೂಡಬಿದ್ರೆ (ಪುರುಷ-ಶೇ.74.92, ಮಹಿಳೆ-ಶೇ.76.93), ಮಂಗಳೂರು ಉತ್ತರ (ಪುರುಷ-ಶೇ.74.01, ಮಹಿಳೆ-ಶೇ.75.40), ಮಂಗಳೂರು ದಕ್ಷಿಣ (ಪುರುಷ-ಶೇ.66.87, ಮಹಿಳೆ -ಶೇ.68.00), ಮಂಗಳೂರು (ಪುರುಷ-ಶೇ.73.99, ಮಹಿಳೆ-ಶೇ.77.66), ಬಂಟ್ವಾಳ (ಪುರುಷ-ಶೇ.80.96, ಮಹಿಳೆ-ಶೇ.82.81) ಮತ್ತು ಪುತ್ತೂರು (ಪುರುಷ-ಶೇ.81.04, ಮಹಿಳೆ-ಶೇ.82.33) ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: 1,09,372 ಪುರುಷ ಮತದಾರರು ಹಾಗೂ 1,09,508 ಮಹಿಳಾ ಮತದಾರರು ಸೇರಿ ಒಟ್ಟು 2,18,880 ಮತದಾರರು. ಈ ಪೈಕಿ 89,195 ಪುರುಷ ಹಾಗೂ 89,192 ಮಹಿಳಾ ಮತದಾರರ ಸಹಿತ ಒಟ್ಟು 1,78,387 ಮತಗಳು ಚಲಾವಣೆಯಾಗಿವೆ.ಮೂಡಬಿದ್ರೆ: ಪುರುಷ ಮತದಾರರು 96,733 ಹಾಗೂ ಮಹಿಳಾ ಮತದಾರರು 1,03,312 ಸಹಿತ ಒಟ್ಟು 2,00,045 ಮತದಾರರಲ್ಲಿ 72,469 ಪುರುಷರು ಹಾಗೂ 79,481 ಮಹಿಳೆಯರು ಮತದಾನ ಮಾಡಿದ್ದಾರೆ.ಮಂಗಳೂರು ಉತ್ತರ: 1,14,694 ಪುರುಷರು, 1,20,132 ಮಹಿಳಾ ಮತದಾರರು ಸೇರಿ ಒಟ್ಟು 2,34,826 ಮತದಾರರು. ಇದರಲ್ಲಿ 84,882 ಪುರುಷರು ಹಾಗೂ 90,574 ಮಹಿಳೆಯರು ಸಹಿತ ಒಟ್ಟು 1,75,456 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.ಮಂಗಳೂರು ದಕ್ಷಿಣ: 1,15,017 ಪುರುಷ ಹಾಗೂ 1,25,040 ಮಹಿಳೆಯರ ಸಹಿತ ಒಟ್ಟು 2,40,057 ಮತದಾರರು. ಈ ಪೈಕಿ 76,913 ಪುರುಷರು ಹಾಗೂ 85,026 ಮಹಿಳೆಯರು ಸಹಿತ ಒಟ್ಟು 1,61,939 ಮಂದಿ ಮತ ಚಲಾಯಿಸಿದ್ದಾರೆ.ಮಂಗಳೂರು: 96,186 ಪುರುಷರು ಹಾಗೂ 99,549 ಮಹಿಳೆಯರ ಸಹಿತ ಒಟ್ಟು 1,95,735 ಮತದಾರರು. ಇದರಲ್ಲಿ 71,167 ಪುರುಷರು ಹಾಗೂ 77,313 ಮಹಿಳೆಯರ ಸಹಿತ ಒಟ್ಟು 1,48,480 ಮಂದಿ ಮತ ಚಲಾವಣೆ ಮಾಡಿದ್ದಾರೆ.ಬಂಟ್ವಾಳ: 1,09,537 ಪುರುಷರು ಹಾಗೂ 1,12,198 ಮಹಿಳೆಯರ ಸಹಿತ ಒಟ್ಟು 2,21,735 ಮತದಾರರು. 88,684 ಪುರುಷರು ಹಾಗೂ 92,906 ಮಹಿಳೆಯರ ಸಹಿತ ಒಟ್ಟು 1,81,590 ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ.ಪುತ್ತೂರು: 1,00,619 ಪುರುಷರು, 1,01,265 ಮಹಿಳೆಯರು ಸಹಿತ ಒಟ್ಟು 2,01,884 ಮತದಾರರು. ಈ ಪೈಕಿ 81,544 ಪುರುಷರು ಹಾಗೂ 83,369 ಮಹಿಳೆಯರು ಸಹಿತ ಒಟ್ಟು 1,64,913 ಮತದಾರರು ಮತಗಳನ್ನು ಚಲಾಯಿಸಿದ್ದಾರೆ.ಸುಳ್ಯ: 98,915 ಪುರುಷ ಹಾಗೂ 99,771 ಮಹಿಳೆಯರು ಸಹಿತ ಒಟ್ಟು 1,98,686 ಮತದಾರರು. 83,380 ಪುರುಷ ಹಾಗೂ 83,474 ಮಹಿಳಾ ಮತದಾರರ ಸಹಿತ ಒಟ್ಟು 1,66,854 ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದಾರೆ.







