ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಮಳಿಗೆಯಿಂದ 6ನೆ ಸುತ್ತಿನ ಉಚಿತ ಪ್ರವಾಸದ ಅದೃಷ್ಟ ಚೀಟಿ ಯೋಜನೆ ವಿಜೇತರು

ಮಂಗಳೂರು, ಮೇ.14:ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ವತಿಯಿಂದ ನವದಂಪತಿಗಳಿಗೆ ಹಮ್ಮಿಕೊಂಡ ‘ಬ್ರೈಡ್ಸ್ ಆಫ್ ಇಂಡಿಯಾ ಕ್ಯಾಂಪೇನ್ ’ ಅದೃಷ್ಟ ಚೀಟಿ ಯೋಜನೆಯ ಆರನೆ ಸುತ್ತಿನಲ್ಲಿ ನವದಂಪತಿಗಳಿಗೆ ಹನಿಮೂನ್ ಪ್ರವಾಸದ ಉಚಿತ ಕೊಡುಗೆಗೆ ಆಯ್ಕೆ ಮಾಡಲಾಯಿತು.
ರಾಜ್ಯ ವ್ಯಾಪ್ತಿಯಲ್ಲಿ ನಡೆದ ಈ ಅದೃಷ್ಟ ಚೀಟಿ ಯೋಜನೆಯಲ್ಲಿ 1000 ದಂಪತಿಗಳು ಉಚಿತ ಹನಿಮೂನ್ ಪ್ರವಾಸದ ಆಯ್ಕೆಯ ಅವಕಾಶ ಪಡೆಯಲಿದ್ದಾರೆ. 6ನೆ ಸುತ್ತಿನ ಆಯ್ಕೆ ನಗರದ ಫಳ್ನಿರ್ ಮಲಬಾರ್ ಮಳಿಗೆಯಲ್ಲಿಂದು ನಡೆಯಿತು. ಅದೃಷ್ಟ ಕೂಪನ್ ಯೋಜನೆಯಲ್ಲಿ ಅಸ್ಮಾ ಬಾನು, ಸುಮಯ್ಯ, ಮುಹಮ್ಮದ್ ದಾವೂದ್, ಲಾರೆನ್ಸ್ ಕೊರ್ರೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ದಂಪತಿಗಳಿಗೆ ದುಬಾ, ಮಲೇಶಿಯಾ, ಸಿಂಗಾಪುರ, ಬಾಲಿ,ಹಾಂಕಾಂಗ್ ಗೆ ಉಚಿತ ಪ್ರವಾಸದ ಅವಕಾಶ ಲಭಿಸಲಿದೆ.ಪ್ರಥಮ ಸುತ್ತಿನಲ್ಲಿ 175 ಮಂದಿ ಆಯ್ಕೆಯಾಗಿದ್ದಾರೆ.
ಸಮಾರಂಭದ ಅತಿಥಿಗಳಾಗಿ ಆಗಮಿಸಿದ ಪ್ರದೀಪ್ ಶೆಟ್ಟಿ ಮತ್ತು ಸಂಧ್ಯಾ ಪಿ.ಶೆಟ್ಟಿ ಹಾಗೂ ಸ್ಟೋರ್ ಹೆಡ್ ಶರತ್ ಚಂದ್ರ ವಿಜೇತರಿಗೆ ಉಚಿತ ಪ್ರವಾಸದ ಕೂಪನ್ ವಿತರಿಸಿದರು. ವಿವಿಧ ಭಾರತೀಯ ಹಬ್ಬದಗಳ ಸಂದರ್ಭದಲ್ಲಿ ಹಾಗೂ ಮದುವೆ ಸಮಾರಂಭಕ್ಕೆ ಪೂರಕವಾಗಿ ಮಲಬಾರ್ ಚಿನ್ನ ಮತ್ತು ವಜ್ರಾಭರಣ ಮಳಿಗೆಗಳಲ್ಲಿ ವಧುವಿನ ಸಿಂಗಾರದ ಅಭರಣಗಳ ವಿಶೇಷ ಸಂಗ್ರಹ ಹೊಂದಿದೆ. ಭಾರತದಲ್ಲಿರುವ ಮಲಬಾರ್ ಚಿನ್ನ ಮತ್ತು ವಜ್ರಾಭರಣ ಮಳಿಗೆಗಳಲ್ಲಿ ಈ ಅವಕಾಶ 2018ರ ನವೆಂಬರ್ 30ರವರೆಗೆ ಗ್ರಾಹಕರಿಗೆ ಲಭಿಸಲಿದೆ (ತಮಿಳು ನಾಡು ಹೊರತು ಪಡಿಸಿ) ಎಂದು ಮಲಬಾರ್ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.







