ರಿಕ್ಷಾ- ಬೈಕ್ ಢಿಕ್ಕಿ: ಆರು ಮಂದಿಗೆ ಗಾಯ
ಗಂಗೊಳ್ಳಿ, ಮೇ 14: ತ್ರಾಸಿ ಬೀಚ್ ಬಳಿಯ ಮಯೂರ ಹೋಟೆಲ್ ಸಮೀಪ ರಾ.ಹೆ. 66ರಲ್ಲಿ ಮೇ 13ರಂದು ಅಪರಾಹ್ನ 3.45ರ ಸುಮಾರಿಗೆ ರಿಕ್ಷಾ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.
ರಿಕ್ಷಾದಲ್ಲಿದ್ದ ತ್ರಾಸಿ ಗ್ರಾಮದ ಮೋವಾಡಿಯ ರಘುರಾಮ, ತಾಯಿ ಸಣ್ಣಮ್ಮ, ತಂಗಿ ನೇತ್ರಾವತಿ ಹಾಗೂ ಅಳಿಯ ಸಾತ್ವಿಕ್ ಗಾಯಗೊಂಡಿದ್ದು, ರಘುರಾಮ ಹಾಗೂ ಸಣ್ಣಮ್ಮ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖ ಲಾಗಿದ್ದಾರೆ. ಬೈಕ್ ಸತೀಶ್ ಪೂಜಾರಿ ಹಾಗೂ ರಿಕ್ಷಾ ಚಾಲಕ ಸಂದೇಶ ದೇವಾಡಿಗ ಕೂಡ ಗಾಯಗೊಂಡಿದ್ದಾರೆ.
ಕಿರಿಮಂಜೇಶ್ವರದಿಂದ ಮೋವಾಡಿಗೆ ಹೋಗುತ್ತಿದ್ದ ರಿಕ್ಷಾ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





