ಇಂಡೋನೇಶ್ಯ: ಪೊಲೀಸ್ ಠಾಣೆಯಲ್ಲಿ ಅವಳಿ ಸ್ಫೋಟ: ಕನಿಷ್ಠ 1 ಸಾವು
ಸುರಬಯ (ಇಂಡೋನೇಶ್ಯ), ಮೇ 14: ಇಂಡೋನೇಶ್ಯದ ಎರಡನೇ ದೊಡ್ಡ ನಗರ ಸುರಬಯದ ಪ್ರಧಾನ ಪೊಲೀಸ್ ಕಚೇರಿಗೆ ಸೋಮವಾರ ಮೋಟರ್‌ಸೈಕಲ್‌ನಲ್ಲಿ ಬಂದ ಇಬ್ಬರು ಭಯೋತ್ಪಾದಕರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ.
ಈ ದಾಳಿಯಲ್ಲಿ ಕನಿಷ್ಠ ಓರ್ವ ಪೊಲೀಸ್ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಚರ್ಚ್‌ಗಳ ಮೇಲೆ ಸರಣಿ ಭಯೋತ್ಪಾದಕ ದಾಳಿ ನಡೆದ ಬೆನ್ನಿಗೇ ಹೊಸ ದಾಳಿ ಸಂಭವಿಸಿದೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಪುರುಷ ಮತ್ತು ಓರ್ವ ಮಹಿಳೆ ಭದ್ರತಾ ತಪಾಸಣಾ ಠಾಣೆಯಲ್ಲಿ ಬೈಕ್ ನಿಲ್ಲಿಸಿದರು ಎಂದು ಅಧಿಕಾರಿಯೋರ್ವರು ತಿಳಿಸಿದರು. ಈ ಸಂದರ್ಭದಲ್ಲಿ ಅವರು ತಮ್ಮನ್ನು ತಾವು ಸ್ಫೋಟಿಸಿಕೊಂಡರು. ಅವಳಿ ಸ್ಫೋಟಗಳಲ್ಲಿ 6 ನಾಗರಿಕರು ಮತ್ತು 4 ಪೊಲೀಸರು ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ಯಾರೂ ಹೊಣೆ ಹೊತ್ತುಕೊಂಡಿಲ್ಲ.
Next Story





