ಆರ್‌ಸಿಬಿಗೆ ಭರ್ಜರಿ ಜಯ
ಪಂಜಾಬ್ 88ಕ್ಕೆ ಆಲೌಟ್

ಇಂದೋರ್, ಮೇ 14: ಐಪಿಎಲ್ ಟ್ವೆಂಟಿ-20 ಟೂರ್ನಿಯ 48ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ
ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 15.1 ಓವರ್‌ಗಳಲ್ಲಿ 88 ರನ್‌ಗಳಿಗೆ ನಿಯಂತ್ರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 92 ರನ್ ಗಳಿಸಿ ಗೆಲುವಿನ ದಡ ಸೇರಿಸಿತು.
ಆರಂಭಿಕ ದಾಂಡಿಗರಾದ ನಾಯಕ ವಿರಾಟ್ ಕೊಹ್ಲಿ ಔಟಾಗದೆ 48 ರನ್(28ಎ, 6ಬೌ,2ಸಿ) ಮತ್ತು ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಔಟಾಗದೆ 40ರನ್(22ಎ, 7ಬೌ) ಗಳಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್‌ಸಿಬಿಯ ಬೌಲರ್‌ಗಳಾದ ಉಮೇಶ್ ಯಾದವ್(23ಕ್ಕೆ 3), ಮುಹಮ್ಮದ್ ಸಿರಾಜ್(17ಕ್ಕೆ 1), ಯಜುವೇಂದ್ರ ಚಹಾಲ್(6ಕ್ಕೆ 1), ಗ್ರಾಂಡ್‌ಹೊಮ್ಮೆ (8ಕ್ಕೆ 1) ಮತ್ತು ಎಂಎಂ ಅಲಿ(13ಕ್ಕೆ 1) ಸಂಘಟಿತ ದಾಳಿಗೆ ಸಿಲುಕಿ ಬೇಗನೇ ಆಲೌಟಾಗಿತ್ತು.
ಪಂಜಾಬ್ ತಂಡದ ಆರಂಭಿಕ ದಾಂಡಿಗರಾದ ಲೋಕೇಶ್ ರಾಹುಲ್(21), ಗೇಲ್ (18), ಆ್ಯರೊನ್ ಫಿಂಚ್(26) ಇವರು ಎರಡಂಕೆಯ ಸ್ಕೋರ್ ದಾಖಲಿಸಿದರು.





