ವಿಜ್ಞಾನ ಪ್ರಬಂಧ ಸ್ಪರ್ಧೆ
ಉಡುಪಿ, ಮೇ 14: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮೇ 22ರ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಂಗವಾಗಿ 18 ವರ್ಷ ಮೇಲ್ಪಟ್ಟ ವರಿಗಾಗಿ ಪರಿಸರ ಸಮತೋಲನೆಯಲ್ಲಿ ಜೀವಿ ವೈವಿಧ್ಯತೆಯ ಪಾತ್ರ ಅಥವಾ ಜೀವಿ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಸಮುದಾಯದ ಪಾತ್ರ ವಿಷಯಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಆಸಕ್ತರು ಮೇ 21ರೊಳಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿಗೆ 500 ಪದಗಳು ಮೀರದಂತೆ ಕನ್ನಡದಲ್ಲಿ ಪ್ರಬಂಧವನ್ನು ಬರೆದು ಇ- ಮೇಲ್ ಅಥವಾ ಪತ್ರ ಮುಖೇನ ತಲುಪಿಸಬೇಕೆಂದು ಗೌರವ ಕಾರ್ಯದರ್ಶಿ ಗಿರೀಶ್ ಬಿ. ಕಡ್ಲೇವಾಡ್ ತಿಳಿಸಿದ್ದಾರೆ.
Next Story





