ಬಾಂಗ್ಲಾ ದಾನಕ್ಕಾಗಿ ನೂಕುನುಗ್ಗಲು; 10 ಸಾವು
ಢಾಕಾ (ಬಾಂಗ್ಲಾದೇಶ), ಮೇ 14: ಆಗ್ನೇಯ ಬಾಂಗ್ಲಾದೇಶದಲ್ಲಿ, ರಮಝಾನ್ ತಿಂಗಳ ಉಪವಾಸಕ್ಕೆ ಮುನ್ನ, ದಾನ ಸ್ವೀಕರಿಸಲು ಉದ್ಯಮಿಯೊಬ್ಬರ ಮನೆಯ ಮುಂದೆ ನೆರೆದಿದ್ದ ಸಾವಿರಾರು ಜನರ ನಡುವೆ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತದಿಂದಾಗಿ ಕನಿಷ್ಠ 10 ಮಹಿಳೆಯರು ಮೃತಪಟ್ಟಿದ್ದಾರೆ ಹಾಗೂ ಸುಮಾರು 50 ಮಂದಿ ಗಾಯಗೊಂಡಿದ್ದಾರೆ.
ಚಿತ್ತಗಾಂಗ್ ಜಿಲ್ಲೆಯ ಉಕ್ಕಿನ ಉದ್ಯಮಿಯೊಬ್ಬರ ಮನೆಯಲ್ಲಿ ಬಟ್ಟೆ ಮತ್ತು ಇತರ ವಸ್ತುಗಳನ್ನು ಸ್ವೀಕರಿಸಲು ಜನರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ದಾನ ಪಡೆಯಲು ಜನರು ನಾ ಮುಂದು, ತಾ ಮುಂದು ಎಂದು ಹೋದಾಗ ನೂಕುನುಗ್ಗಲು ಸಂಭವಿಸಿತು. ಬಳಿಕ ಹಲವಾರು ಮಂದಿ ಕಾಲ್ತುತಳಿತಕ್ಕೆ ಬಲಿಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘‘ಅಲ್ಲಿ 10 ಸಾವಿರದಿಂದ 12 ಸಾವಿರದಷ್ಟು ಜನರು ಸೇರಿದ್ದರು. ಹೆಚ್ಚಿನವರು ಮಹಿಳೆಯರಾಗಿದ್ದರು’’ ಎಂದರು.
Next Story





