ಆಲಿಗಢ ಮುಸ್ಲಿಂ ವಿವಿ ಹೆಸರು ಬದಲಿಸಲು ಹರ್ಯಾಣ ಸಚಿವ ಒತ್ತಾಯ

ಚಂಡೀಗಢ, ಮೇ 14: ಆಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ(ಅಮು)ದಲ್ಲಿ ಮುಹಮ್ಮದ್ ಆಲಿ ಜಿನ್ನಾ ಭಾವಚಿತ್ರ ಇರುವ ಕುರಿತ ವಿವಾದ ತಣ್ಣಗಾಗುವ ಮಧ್ಯೆಯೇ ಹರ್ಯಾಣದ ವಿತ್ತ ಸಚಿವ ಕ್ಯಾ. ಅಭಿಮನ್ಯು ಆಲಿಗಢ ಮುಸ್ಲಿಂ ವಿವಿಯ ಹೆಸರನ್ನು ರಾಜಾ ಮಹೇಂದ್ರ ಪ್ರತಾಪ್ ವಿವಿ ಎಂದು ಮರುನಾಮಕರಣಗೊಳಿಸಲು ಒತ್ತಾಯಿಸಿದ್ದಾರೆ.
ರೇವರಿ ಎಂಬಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಭಿಮನ್ಯು, ರಾಜಾ ಮಹೇಂದ್ರ ಪ್ರತಾಪ್ ದೇಶದ ಯುವಜನತೆ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಆಲಿಗಢ ಮುಸ್ಲಿಂ ವಿವಿಯನ್ನು ನಿರ್ಮಿಸಲು ತಮ್ಮ ಜಮೀನನ್ನು ದಾನವಾಗಿತ್ತಿದ್ದರು. ಆದರೆ ಇವರನ್ನು ಮರೆತು ಬಿಟ್ಟು , ನಮ್ಮ ದೇಶವನ್ನು ವಿಭಜಿಸಿದ ಜಿನ್ನಾ ಭಾವಚಿತ್ರವನ್ನು ವಿವಿಯಲ್ಲಿ ಇರಿಸಲಾಗಿರುವುದು ವಿಷಾದನೀಯ ಎಂದು ಹೇಳಿದರು. ಪಾಕಿಸ್ತಾನದ ಜನಕ ಮುಹಮ್ಮದ್ ಆಲಿ ಜಿನ್ನಾ ಭಾವಚಿತ್ರವನ್ನು ‘ಅಮು’ವಿನಿಂದ ತೆಗೆದುಹಾಕಬೇಕೆಂದು ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದೆ.
Next Story





