'ಇವಿಎಂಗಳ ವಿಜಯ': ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆಗೆ ರಾಜ್ ಠಾಕ್ರೆ ವ್ಯಂಗ್ಯ

ಮುಂಬೈ, ಮೇ 15: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೂರರ ಗಡಿ ದಾಟುತ್ತಿದ್ದಂತೆಯೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸ್ಥಾಪಕ ರಾಜ್ ಠಾಕ್ರೆ ಟ್ವೀಟ್ ಒಂದನ್ನು ಮಾಡಿ ವಿದ್ಯುನ್ಮಾನ ಮತಯಂತ್ರಗಳನ್ನು ಹೊಗಳಿದ್ದಾರೆ.
"ಇದು ಇವಿಎಂಗಳ ವಿಜಯ'' ಎಂದು ಠಾಕ್ರೆ ಟ್ವೀಟ್ ಮಾಡಿದ್ದಾರೆ. ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದ ಪೈಕಿ ಕಾಂಗ್ರೆಸ್ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿರುವ ಬೆನ್ನಿಗೆ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ನೇತೃತ್ವದಲ್ಲಿ ಇತರ ಐದು ಅಭ್ಯರ್ಥಿಗಳು ಇವಿಎಂ ದುರುಪಯೋಗ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ರಿಟರ್ನಿಂಗ್ ಆಫೀಸರ್ ಮುಂದೆ ಆಕ್ಷೇಪ ದಾಖಲಿಸಿದ್ದರು. ತಮ್ಮ ಕ್ಷೇತ್ರಗಳ ಫಲಿತಾಂಶವನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ್ದರು ಎನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
Next Story





