ಗಮನ ಸೆಳೆದ ಗಣ್ಯರ ಕ್ಷೇತ್ರಗಳ ಫಲಿತಾಂಶ: ಬಾದಾಮಿ
ಕರ್ನಾಟಕ ವಿಧಾನಸಭಾ ಚುನಾವಣೆ

ಬೆಂಗಳೂರು, ಮೇ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲು ಕಂಡಿದ್ದು, ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ-67,599 ಮತ ಪಡೆದಿದ್ದು, ಬಿಜೆಪಿಯ ಬಿ.ಶ್ರೀರಾಮುಲು 65,903 ಮತಗಳನ್ನು ಗಳಿಸಿದ್ದು, ಕೇವಲ 1,696 ಮತಗಳ ಪ್ರಯಾಸದ ಗೆಲುವನ್ನು ಸಿದ್ದರಾಮಯ್ಯ ತನ್ನದಾಗಿಸಿಕೊಂಡಿದ್ದಾರೆ. ಅತ್ತ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಗೆಲುವು ಸಾಧಿಸಿದ್ದಾರೆ.
Next Story





