ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಆರೋಪಿ, ಸೊತ್ತುಗಳು ವಶಕ್ಕೆ
ಕಾಪು, ಮೇ16: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ನಿನ್ನೆ ಸಂಜೆ ಕಾಪು ಪಡುಗ್ರಾಮದ ಕಾಪು ಪೇಟೆಯಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಮದ್ಯ ಮಾರಾಟ ಮಾಡುತಿದ್ದ ಆರೋಪಿಯನ್ನು ವಶಕ್ಕೆ ಪಡೆದಿರುವ ಕಾಪು ಪೊಲೀಸರು, ಅಲ್ಲಿನ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ವೈಶಾಲಿ ಬಾರ್ ಮತ್ತು ರೆಸ್ಟೋರೆಂಟ್ನ ಬಾಗಿಲನ್ನು ತೆರೆದು ಚುನಾವಣಾ ನೀತಿ ಸಂಹಿತೆಯಂತೆ ಮದ್ಯ ನಿಷೇಧ ಇದ್ದರೂ, ಮದ್ಯವನ್ನು ಗಿರಾಕಿಗಳಿಗೆ ಸರಬರಾಜು ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ರಾತ್ರಿ 9ಗಂಟೆಗೆ ಹೊಟೇಲ್ ಮೇಲೆ ದಾಳಿ ನಡೆಸಿದ ಪೊಲೀಸರು ಮದ್ಯ ಸರಬರಾಜು ಮಾಡುತಿದ್ದ ಅಭಿಜಿತ್ (33)ನ್ನು ಸೊತ್ತುಗಳೊಂದಿಗೆ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story