ಗೋವಾ: ದೇವಸ್ಥಾನದ ಕೆರೆಯಲ್ಲಿ ಮುಳುಗಿ ಮಂಗಳೂರಿನ ಮೂವರು ಮಕ್ಕಳ ಮೃತ್ಯು

ಮಂಗಳೂರು, ಮೇ 16: ದೇವರ ದರ್ಶನಕ್ಕೆಂದು ಗೋವಾಕ್ಕೆ ತೆರಳಿದ್ದ ಮಂಗಳೂರಿನ ಕುಟುಂಬವೊಂದಕ್ಕೆ ಸೇರಿದ ಮೂವರು ಮಕ್ಕಳು ಪೊಂಡಾ ಸಮೀಪದ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರಂತ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಮೃತ ಮಕ್ಕಳನ್ನು ಅದಿತಿ ಭಟ್ (12), ಭುವನೇಶ್ವರ ಭಟ್ (8) ಮತ್ತು ಶ್ರವಣ ಬಾಲಕೃಷ್ಣ ಹೊಳ್ಳ (7) ಎಂದು ಹೆಸರಿಸಲಾಗಿದೆ.
ಗುರುಪುರ ಸಮೀಪದ ಪ್ರದೀಪ ಭಟ್ ಕುಟುಂಬ ತಮ್ಮ ಮಕ್ಕಳು-ಅಳಿಯಂದಿರು ಮತ್ತು ಮೊಮ್ಮಕ್ಕಳೊಂದಿಗೆ ಪೊಂಡಾ ಸಮೀಪದ ನಾಗೇಶಿ ಮಹಾರುದ್ರ ದೇವಸ್ಥಾನಕ್ಕೆ ತೆರಳಿದ್ದರು. ಇಂದು ಸಂಜೆ ಆರು ಗಂಟೆಯ ಸುಮಾರಿಗೆ ನಾಲ್ವರು ಮಕ್ಕಳು ದೇವಸ್ಥಾನದ ಕೆರೆಯಲ್ಲಿ ಕೈಕಾಲು ತೊಳೆಯಲು ಹೋಗಿದ್ದ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿದ್ದರು. ಈ ಪೈಕಿ ಒಂದು ಮಗುವನ್ನು ರಕ್ಷಿಸಲಾಗಿದ್ದು, ಪೊಂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.
Next Story





