ಸಕಲೇಶಪುರ: ಮೈತ್ರಿ ಪಕ್ಷಗಳಿಗೆ ಅಹ್ವಾನ ನೀಡದ ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ

ಸಕಲೇಶಪುರ,ಮೇ.16: ಜಾತ್ಯಾತೀತ ಸಮ್ಮಿಶ್ರ ಪಕ್ಷಗಳಿಗೆ ಸರಕಾರ ರಚಿಸಲು ಅಹ್ವಾನ ನೀಡದೆ ಬಿಜೆಪಿ ಪರ ಅಸಂವಿದಾನಾತ್ಮಕವಾಗಿ ಸರಕಾರ ರಚಿಸಲು ರಾಜ್ಯಪಾಲರು ಮುಂದಾಗಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಇಂದು ಸಂಜೆ 7 ಗಂಟೆಗೆ ಪಟ್ಟಣದ ಹಳೆಬಸ್ ನಿಲ್ದಾಣದಲ್ಲಿ ಪಂಜು ಹಿಡಿದು ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆ ವೇಳೆ ಪ್ರಗತಿಪರ ಸಂಗಟನೆಗಳ ಒಕ್ಕೂಟ ಅಧ್ಯಕ್ಷ ಜೈ ಭೀಮ್ ಮಂಜು, ಜನತಾ ದಳ ಮುಖಂಡ ಸ ಬಾ ಬಾಸ್ಕರ್, ಕಾಡಪ್ಪ, ನವೀನ್ ಸದಾ, ಖಲಂದರ್ ಮನ, ಕುನಿಗನ ಹಳ್ಳಿ ನಿಂಗರಾಜ್, ಸೇರಿದಂತೆ ಅನೇಕರು ಹಾಜರಿದ್ದರು.
Next Story





