ಫೆಲೆಸ್ತೀನಿಯರ ಮೇಲಿನ ದಬ್ಬಾಳಿಕೆಗೆ ಸೌದಿ ಖಂಡನೆ
ರಿಯಾದ್, ಮೇ 16: ತನ್ನ ರಾಯಭಾರ ಕಚೇರಿಯನ್ನು ಟೆಲ್ ಅವೀವ್ನಿಂದ ಜೆರುಸಲೇಂಗೆ ಸ್ಥಳಾಂತರಿಸುವ ಅಮೆರಿಕದ ನಿರ್ಧಾರವನ್ನು ವಿರೋಧಿಸುವುದಾಗಿ ಸೌದಿ ಅರೇಬಿಯ ಸರಕಾರ ಮಂಗಳವಾರ ಹೇಳಿದೆ.
‘‘ಅಮೆರಿಕದ ಈ ಕ್ರಮವು, ಅಂತಾರಾಷ್ಟ್ರೀಯ ನಿರ್ಣಯಗಳ ಮೂಲಕ ಖಾತರಿಪಡಿಸಲಾದ ಫೆಲೆಸ್ತೀನಿಯರ ಹಕ್ಕುಗಳಿಗೆ ವಿರುದ್ಧವಾಗಿದೆ’’ ಎಂದು ಸೌದಿ ಅರೇಬಿಯದ ಸಚಿವ ಸಂಪುಟವು ಹೇಳಿಕೆಯೊಂದರಲ್ಲಿ ತಿಳಿಸಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.
‘‘ಇಂಥ ಅಸಮರ್ಥನೀಯ ಕ್ರಮದ ಪರಿಣಾಮಗಳು ಭೀಕರವಾಗಿರುತ್ತವೆ ಎಂಬ ಎಚ್ಚರಿಕೆಯನ್ನು ಸೌದಿ ಅರೇಬಿಯ ಸರಕಾರ ಈಗಾಗಲೇ ನೀಡಿದೆ’’ ಎಂದು ಏಜನ್ಸಿ ಹೇಳಿದೆ.
Next Story