Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸರ್ವಾಂಗೀಣ ಅಭಿವೃದ್ಧಿ ನನ್ನ ಕನಸು: ನೂತನ...

ಸರ್ವಾಂಗೀಣ ಅಭಿವೃದ್ಧಿ ನನ್ನ ಕನಸು: ನೂತನ ಶಾಸಕ ವೇದವ್ಯಾಸ ಕಾಮತ್

ಸಂದರ್ಶನ: ಎಸ್ಕೆಎಂಸಂದರ್ಶನ: ಎಸ್ಕೆಎಂ17 May 2018 12:13 PM IST
share
ಸರ್ವಾಂಗೀಣ ಅಭಿವೃದ್ಧಿ ನನ್ನ ಕನಸು: ನೂತನ ಶಾಸಕ ವೇದವ್ಯಾಸ ಕಾಮತ್

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹೊಸ ಮುಖವಾಗಿ ಚುನಾವಣೆಗೆ ಸ್ಪರ್ಧಿಸಿದ್ದ ವೇದವ್ಯಾಸ್ ಕಾಮತ್‌ರವರು ಪ್ರಥಮ ಸ್ಪರ್ಧೆಯಲ್ಲೇ ತಮ್ಮ ಎದುರಾಳಿ, ಹಾಲಿ ಶಾಸಕ ಕಾಂಗ್ರೆಸ್‌ನ ಜೆ.ಆರ್. ಲೋಬೋ ವಿರುದ್ಧ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಯುವ ನಾಯಕನಾಗಿರುವ ಡಿ. ವೇದವ್ಯಾಸ ಕಾಮತ್ ಪ್ರಥಮ ಪ್ರಯತ್ನದಲ್ಲಿಯೇ 16075 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವೇದ ವ್ಯಾಸ ಕಾಮತ್ 86,545 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಜೆ.ಆರ್. ಲೋಬೋ 70,470 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,40,057 ಮತಗಳಲ್ಲಿ 1,62,324 ಮತಗಳು ಚಲಾವಣೆಯಾಗಿತ್ತು. 2013ರ ಚುನಾವಣೆಗೆ ಮೊದಲು ಸತತ ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾಗಿ ವಿಧಾನಸಭಾ ಉಪ ಸಭಾಪತಿಯಾಗಿದ್ದ ಯೋಗೀಶ್ ಭಟ್ ಅವರಿಂದ ಶಾಸಕ ಜೆ.ಆರ್. ಲೋಬೋ ಶಾಸಕ ಸ್ಥಾನವನ್ನು ಕಸಿದಿದ್ದರು. ಆ ಸ್ಥಾನವನ್ನು ಮತ್ತೆ ಬಿಜೆಪಿಗೆ ದೊರಕಿಸಿಕೊಟ್ಟಿರುವ ವೇದವ್ಯಾಸ ಕಾಮತ್‌ಮಂಗಳೂರಿನ ಅಭಿವೃದ್ಧಿ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ‘ವಾರ್ತಾಭಾರತಿ’ ಜತೆ ಅನಿಸಿಕೆ ಹಂಚಿಕೊಂಡಿದ್ದು ಹೀಗೆ.

*ಹೊಸ ಮುಖವಾಗಿ ಆಯ್ಕೆಯಾಗಿರುವ ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?

ನಗರದಲ್ಲಿ ಮಳೆಗಾಲದಲ್ಲೂ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಎಲ್ಲಾ ಜನರಿಗೆ ಸಮರ್ಪಕ ಕುಡಿಯುವ ನೀರಿಗೆ ಏನೆಲ್ಲಾ ಮಾಡಬೇಕು ಅದನ್ನು ಮಾಡಲಾಗುವುದು. ಅದನ್ನು ಬಗೆಹರಿಸುವ ಪ್ರಯತ್ನದ ಜತೆಗೆ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ವಹಿಸಲಾಗುವುದು. ಪ್ರವಾಸೋದ್ಯಮ ಹಾಗೂ ಉದ್ಯೋಗ ಸೃಷ್ಟಿ ಬಗೆಹರಿಸಲು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡಲಿದ್ದೇನೆ. ಯುವಕರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಕಾಲೇಜು ಶಿಕ್ಷಣ ಮುಗಿಸಿ ಹೊರಬಂದವರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದೇನೆ. ಶಿಕ್ಷಣದ ಜತೆಗೆ ಮಂಗಳೂರನ್ನು ಮೆಡಿಕಲ್ ಹಬ್ ಆಗಿಸುವ ನಿಟ್ಟಿನಲ್ಲಿ ನಾನು ಪ್ರಯತ್ನಿಸಲಿದ್ದೇನೆ. ಹೆಚ್ಚಿನ ಕಡೆಗಳಲ್ಲಿ ನಗರದಲ್ಲಿ ಸುಗಮ ಸಂಚಾರಕ್ಕೆ ತೊಂದರೆ, ಫುಟ್‌ಪಾತ್‌ಗಳಲ್ಲಿ ಅಡೆತಡೆ ಸಮಸ್ಯೆಗಳಿವೆ. ಅದನ್ನು ಇಲಾಖೆಗಳ ನುರಿತ ತಂತ್ರಜ್ಞರ ಮೂಲಕ ಯಾವ ರೀತಿಯಲ್ಲಿ ಬಗೆಹರಿಸಲು ಸಾಧ್ಯ ಎಂಬ ಬಗ್ಗೆ ಪ್ರಯತ್ನಿಸಲಿದ್ದೇನೆ. ಅದರ ಜತೆಗೆ ಅಪರಾಧಗಳು ನಡೆದಾಗ ಯಾವುದೇ ಹಸ್ತಕ್ಷೇಪವಿಲ್ಲದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಪ್ರಯತ್ನಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದೇನೆ. ಎಲ್ಲಾ ಜಾತಿ, ಧರ್ಮದವರನ್ನು ಒಗ್ಗೂಡಿಸಿ, ಅಭಿವೃದ್ಧಿಗಾಗಿ ಪ್ರಯತ್ನಿಸಲಿದ್ದೇನೆ.

*ಸ್ಮಾರ್ಟ್ ಸಿಟಿ ಕುರಿತಂತೆ ವಿಶೇಷ ಆಲೋಚನೆಗಳಿವೆಯೇ?

ಸ್ಮಾರ್ಟ್ ಸಿಟಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಲ್ಲಿ ಸಾರ್ವಜನಿಕರು, ಮತದಾರರ ಅಪೇಕ್ಷೆಯನ್ನು ಈಡೇರಿಸಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ನಾನು ಮಾಡಲಿದ್ದೇನೆ.

*ಯುವ ನಾಯಕರಾಗಿ ಕ್ಷೇತ್ರದ ಅಭಿವೃದಿಯ ಕನಸುಗಳೇನು?

ಕನಸುಗಳು ತುಂಬಾ ಇವೆ. ಪ್ರವಾಸೋದ್ಯಮ, ರೈಲ್ವೆಯನ್ನು ಮೇಲ್ದರ್ಜೆಗೇರಿಸುವ ಹಲವಾರು ಕನಸುಗಳಿವೆ. ಕೈಗಾರಿಕಾ ವಲಯದಲ್ಲಿ ಯಾವ ರೀತಿಯಲ್ಲಿ ಅಭಿವೃದ್ಧಿ ಸಾಧ್ಯ ಎಂಬ ಬಗ್ಗೆಯೂ ಚಿಂತಿಸಲಾಗುವುದು. ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಯ ಕುರಿತಾದ ಕನಸನ್ನು ನಾನು ಹೊಂದಿದ್ದೇನೆ. ಮನೆ ಇಲ್ಲದವರಿಗೆ ಆಶ್ರಯ ಕೊಡಿಸುವ ಆಲೋಚನೆಯೂ ಇದೆ.

*ನಗರದ ವಿಭಿನ್ನ ಸಮಸ್ಯೆ, ಸವಾಲುಗಳನ್ನು ಯಾವ ರೀತಿ ಎದುರಿಸುವಿರಿ?

ನಗರದ ಹಲವು ಜನರಲ್ಲಿ ನಾನು ಮಾತನಾಡಿದ್ದೇನೆ. ಮಂಗಳೂರಿನ ಅಭಿವೃದ್ದಿ ದಿಸೆಯಲ್ಲಿ ನಾನು ಎಲ್ಲರನ್ನೂ ಒಗ್ಗೂಡಿಸಿ, ಹಿರಿಯ ಅನುಭವಿಗಳನ್ನು ಸೇರಿಸಿಕೊಂಡು ನಗರದಲ್ಲಿನ ಸಮಸ್ಯೆಗಳು, ಸವಾಲುಗಳನ್ನು ಎದುರಿಸಲಿದ್ದೇನೆ.

*ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತವಿದೆ, ಅದು ನಿಮ್ಮ ಜನಸೇವೆಗೆ ಅಡ್ಡಿಯಾಗುವ ಆತಂಕವಿದೆಯೇ?

ಅಂತಹ ಯಾವುದೇ ಆತಂಕವಿಲ್ಲ. ಮಂಗಳೂರಿನ ಅಭಿವೃದ್ದಿಗೆ ಎಲ್ಲರೂ ಜತೆಯಾಗಿ ಕೈಜೋಡಿಸಿ, ರಾಜಕಾರಣ ಮಾಡದೆ, ನಮ್ಮ ಮಂಗಳೂರು ಎಂಬ ನಿಟ್ಟಿನಲ್ಲಿ ಕೆಲಸ ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿಯಾಗಲಿದೆ. ನನಗೆ ಈ ಬಗ್ಗೆ ಮಹಾನಗರ ಪಾಲಿಕೆಯ ಎಲ್ಲಾ ಸದಸ್ಯರು ಪಕ್ಷಭೇದವಿಲ್ಲದೆ ಸಹಕಾರ ನೀಡುವ ನಿರೀಕ್ಷೆ, ವಿಶ್ವಾಸವಿದೆ. ಎಲ್ಲರೂ ಅಭಿವೃದ್ಧಿ ಬಯಸುವವರು. ಹಾಗಾಗಿ ಎಲ್ಲರೂ ನನ್ನ ಕೆಲಸ ಕಾರ್ಯಗಳಿಗೆ ಸಹಕಾರ ನೀಡಲಿದ್ದಾರೆ.

*ಮಂಗಳೂರು ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿಯನ್ನು ಹೇಗೆ ದೂರ ಮಾಡುವಿರಿ?

ಕೋಮು ಸೂಕ್ಷ್ಮ ಎಂಬುದು ರಾಜಕೀಯ ವ್ಯವಸ್ಥೆಗಳಿಂದಾಗಿ ಹುಟ್ಟಿರುವಂತಹದ್ದು. ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ, ಜನರಿಗೆ ಏನು ಅಗತ್ಯವಿದೆ, ಅವರ ಬೇಡಿಕೆಗಳೇನು ಎಂಬ ಬಗ್ಗೆ ತಿಳಿದು ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿದಾಗ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಕಾರಣವಾಗುವುದಿಲ್ಲ. ನಮಗೆ ಏನು ಬೇಕು ಎಂಬುದಕ್ಕಿಂತ ಜನರ ಬೇಡಿಕೆಗಳೇನು ಎಂಬುದನ್ನು ತಿಳಿಯುವ ಪ್ರಯತ್ನ ಅಗತ್ಯವಾಗಿ ಆಗಬೇಕು. ಅದನ್ನು ನಾನು ಮಾಡಲಿದ್ದೇನೆ. ತಪ್ಪು ಯಾರೇ ಮಾಡಿರಲಿ. ಅಲ್ಲಿ ರಾಜಕೀಯ ಹಸ್ತಕ್ಷೇಪ ಆಗಬಾರದು. ತಪ್ಪಿತಸ್ಥರಿಗೆ ನ್ಯಾಯಯುತವಾಗಿ ಶಿಕ್ಷೆ ನೀಡುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಲು ಅವಕಾಶ ನೀಡಬೇಕು. ಆಗ ಒಂದು ಸಲ ತಪ್ಪು ಮಾಡಿದಾತ ತನ್ನ ರಕ್ಷಣೆಗೆ ಯಾರೂ ಇಲ್ಲವೆಂದು ಅರಿತಾಗ ಮತ್ತೆ ಅಂತಹ ತಪ್ಪುಗಳನ್ನು ಮಾಡಲು ಹೋಗುವುದಿಲ್ಲ. ಅಂತಹ ವಾತಾವರಣ ಸೃಷ್ಟಿಯಾಗಬೇಕು.

share
ಸಂದರ್ಶನ: ಎಸ್ಕೆಎಂ
ಸಂದರ್ಶನ: ಎಸ್ಕೆಎಂ
Next Story
X