ನಿರುದ್ಯೋಗದಿಂದ ನೊಂದ ಯುವಕ ವೀಡಿಯೊ ಸಂದೇಶ ದಾಖಲಿಸಿ ಆತ್ಮಹತ್ಯೆ

ಹೈದರಾಬಾದ್, ಮೇ 17: ಉದ್ಯೋಗ ದೊರಕದ ಬೇಸರದಿಂದ 21ರ ಹರೆಯದ ಯುವಕನೋರ್ವ , ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೊ ಸಂದೇಶ ದಾಖಲಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸರೂರ್‌ನಗರದಲ್ಲಿ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಯುವಕ ಉದ್ಯೋಗ ದೊರಕದೆ ಖಿನ್ನನಾಗಿದ್ದ. ಬುಧವಾರ ರಾತ್ರಿ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್‌ನಲ್ಲಿ ದಾಖಲಿಸಿಕೊಂಡಿರುವ ವೀಡಿಯೊ ಸಂದೇಶದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾನೆ. ಬುಧವಾರ ಕೂಡಾ ಈತ ಉದ್ಯೋಗದ ಸಂದರ್ಶನಕ್ಕೆ ಹಾಜರಾಗಿದ್ದ. ಆದರೆ ಉದ್ಯೋಗ ಪಡೆಯಲು ವಿಫಲನಾಗಿದ್ದ. ಈ ಹಿನ್ನೆಲೆಯಲ್ಲಿ ವಿಪರೀತ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story





