ಹಂಗಾಮಿ ಸ್ಪೀಕರ್ ಹುದ್ದೆಗೆ ಈ ಪ್ರಮುಖ ಕಾಂಗ್ರೆಸ್ ನಾಯಕನ ಹೆಸರು ಸೂಚನೆ

ಬೆಂಗಳೂರು, ಮೇ 17: ಕರ್ನಾಟಕ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ ದೇಶಪಾಂಡೆ ಅವರ ಹೆಸರನ್ನು ವಿಧಾನಸಭೆಯ ಸಚಿವಾಲಯ ಸೂಚಿಸಿದೆ. ಎಂಟನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೇಶಪಾಂಡೆ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯ ಎಂಬ ನೆಲೆಯಲ್ಲಿ ಅವರ ಹೆಸರು ಸೂಚಿತವಾಗಿದೆ.
ನೂತನ ವಿಧಾನಸಭೆಯ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ಸ್ಪೀಕರ್ ಆಯ್ಕೆಯಾಗುವವರೆಗೆ ತಾತ್ಕಾಲಿಕವಾಗಿ ವಿಧಾನಸಭೆಯನ್ನು ನಡೆಸುವ ಹೊಣೆ ಹಂಗಾಮಿ ಸ್ಪೀಕರ್ ಮೇಲಿರುತ್ತದೆ. ಹೊಸ ಸದಸ್ಯರ ಪ್ರಮಾಣ ವಚನವನ್ನು ಅವರೇ ನೆರವೇರಿಸುತ್ತಾರೆ.
ಸದ್ಯ ಯಡಿಯೂರಪ್ಪ ಸರಕಾರ ತನ್ನ ಬಹುಮತ ಸಾಬೀತುಪಡಿಸಬೇಕಾಗಿರುವುದರಿಂದ ಅದನ್ನು ನಡೆಸಿಕೊಡುವ ಸ್ಪೀಕರ್ ಹುದ್ದೆ ಮಹತ್ವ ಪಡೆದುಕೊಂಡಿದೆ. ಆದರೆ ಹಂಗಾಮಿ ಸ್ಪೀಕರ್ ಆ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ನಡೆಸಲಾಗುವುದಿಲ್ಲ. ಆದರೆ ಸದ್ಯ ಯಡಿಯೂರಪ್ಪ ಸರಕಾರವೇ ಅಲ್ಪಮತದಲ್ಲಿರುವುದರಿಂದ ಅವರು ಹೇಗೆ ಹೊಸ ಸ್ಪೀಕರ್ ಆಯ್ಕೆ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ.
Next Story





