ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿ ಟೂರಿಸ್ಟ್ ಬೋಟ್ ಸಂಚಾರ ಸ್ಥಗಿತ
ಉಡುಪಿ, ಮೇ 17: ಮಲ್ಪೆಬೀಚ್‌ನಿಂದ ಹಾಗೂ ಮಲ್ಪೆಬಂದರಿನಿಂದ ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರಯಾಣಿಸುವ ಬೋಟ್‌ಗಳಿಗೆ ಮತ್ತು ಮಲ್ಪೆ ಬೀಚ್‌ನಲ್ಲಿ ಜಲಕ್ರೀಡಾ ಚಟುವಟಿಕೆ ನಡೆಸುವ ಎಲ್ಲಾ ಪ್ರವಾಸಿ ಬೋಟ್‌ಗಳಿಗೆ ಪ್ರತಿ ವರ್ಷದಂತೆ ಮೇ 16ರಿಂದ ಸೆಪ್ಟಂಬರ್ 15ರವರೆಗೆ ನಿಷೇಧ ವಿಧಿಸಲಾಗಿದೆ.
ಈ ಅವಧಿಯಲ್ಲಿ ಪಶ್ಚಿಮ ಕರಾವಳಿಯಲ್ಲಿ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ ಹಾಗೂ ಬೋಟ್ ಚಲಾಯಿಸುವುದು ನಿಷಿದ್ದವಾಗಿ ರುತ್ತದೆ ಎಂದು ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





