ಹುಟ್ಟುಹಬ್ಬದ ಹಿನ್ನೆಲೆ: ತಿರುಪತಿಗೆ ತೆರಳಿದ ದೇವೇಗೌಡ

ಬೆಂಗಳೂರು, ಮೇ 17: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುರುವಾರ ತಿರುಪತಿಗೆ ತೆರಳಿದ್ದಾರೆ.
ಶುಕ್ರವಾರ ದೇವೇಗೌಡರಿಗೆ 86 ವರ್ಷದ ಜನ್ಮದಿನವಾಗಲಿದೆ. ಹುಟ್ಟುಹಬ್ಬದಂದು ತಿರುಪತಿಯ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ.
ಪ್ರತಿ ವರ್ಷ ದೇವೇಗೌಡ ತಮ್ಮ ಹುಟ್ಟುಹಬ್ಬದಂದು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುವ ವಾಡಿಕೆಯನ್ನು ಇಟ್ಟುಕೊಂಡಿದ್ದು, ಗುರುವಾರ ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ.
Next Story





