ಕಾಳಾವರ: ‘ಗುರುಸ್ಮೃತಿ’ ಮನೆ ಹಸ್ತಾಂತರ

ಕುಂದಾಪುರ, ಮೇ 17: ಉಡುಪಿಯ ಯಕ್ಷಗಾನ ಕಲಾರಂಗ ಕುಂದಾಪುರ ತಾಲೂಕಿನ ಕಾಳಾವರದ ವಿದ್ಯಾಪೋಷಕ್ ಫಲಾನುಭವಿ ಬಡ ವಿದ್ಯಾರ್ಥಿನಿ ಸಂಜನಾ ಮೊಗವೀರ ಇವರ ಕುಟುಂಬಕ್ಕೆ ನಿರ್ಮಿಸಿಕೊಟ್ಟ ಮನೆ ‘ಗುರುಸ್ಮೃತಿ’ಯ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಯಕ್ಷಗಾನ ಕಲಾರಂಗ ದಾನಿಗಳ ನೆರವಿನಿಂದ ವಿದ್ಯಾಪೋಷಕ್ ವಿದ್ಯಾರ್ಥಿ ಗಳಿಗೆ ನಿರ್ಮಿಸಿಕೊಟ್ಟ 10ನೇ ಮನೆ ಇದಾಗಿದೆ. ಗುರುಸ್ಮೃತಿ ಟ್ರಸ್ಟ್‌ನ ವರಿಷ್ಠರಾದ ಡಾ. ದೀಪಕ್ ಪ್ರಭು ಜ್ಯೋತಿ ಬೆಳಗಿಸಿ ಮನೆಯನ್ನು ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಗೀತಾನಂದ ಪೌಂಡೇಶನ್‌ನ ಅಧ್ಯಕ್ಷ ಆನಂದ ಸಿ. ಕುಂದರ್, ಸಮಾಜದಲ್ಲಿ ದಾನಿಗಳಿದ್ದರೂ ಅದನ್ನು ಸತ್ಪಾತ್ರರಿಗೆ ತಲುಪಿಸುವ ಇಂತಹ ಸಾಮಾಜಿಕ ಸಂಘಟನೆಗಳು ಅಪರೂಪವೆಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿ ಉಡುಪಿಯ ಉದ್ಯಮಿ ಯು. ವಿಶ್ವನಾಥ ಶೆಣೈ ಶುಭ ಕೋರಿ ಮಾತನಾಡಿದರು. ಆರು ವರ್ಷದ ಹಿಂದೆ ಮನೆ ಕಟ್ಟಲು ಆರಂಭಿಸಿ ನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡಿದ್ದ ಮನೆಯನ್ನು ಅಂದಾಜು ಮೂರು ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಳಿಸುವಲ್ಲಿ ಗುರುಸ್ಮೃತಿ ಟ್ರಸ್ಟ್ ಆರ್ಥಿಕ ನೆರವು ನೀಡಿತ್ತು.
ಸಂಸ್ಥೆಯ ಅ್ಯಕ್ಷಕೆ.ಗಣೇಶ್‌ರಾವ್‌ಸ್ವಾಗತಿಸಿಉಡುಪಿಯಉದ್ಯಮಿಯು.ವಿಶ್ವನಾಥಶೆಣೈಶು ಕೋರಿ ಮಾತನಾಡಿದರು. ಆರು ವರ್ಷದ ಹಿಂದೆ ಮನೆ ಕಟ್ಟಲು ಆರಂಭಿಸಿ ನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡಿದ್ದ ಮನೆಯನ್ನು ಅಂದಾಜು ಮೂರು ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಳಿಸುವಲ್ಲಿ ಗುರುಸ್ಮೃತಿ ಟ್ರಸ್ಟ್ ಆರ್ಥಿಕ ನೆರವು ನೀಡಿತ್ತು.
ಡಾ.ದೀಪಕ್ ಪ್ರಭು ಹಾಗೂ ಆನಂದ ಸಿ. ಕುಂದರ್ ಇವರಿಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷರು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಸಂಜನಾ ಮೊಗವೀರ ಮತ್ತು ಅವರ ತಾಯಿ ಶಾಮಲಾ ಮೊಗವೀರ ತಮ್ಮ ಕಷ್ಟಕ್ಕೆ ಸ್ಪಂದಿಸಿ ಸೂರು ಕಲ್ಪಿಸಿಕೊಟ್ಟ ಸಂಸ್ಥೆ ಹಾಗೂ ದಾನಿಗಳಿಗೆ ಕೃತಜ್ಞತೆ ತಿಳಿಸಿದರು.
ಗೃಹ ನಿರ್ಮಾಣದ ಮೇಲುಸ್ತುವಾರಿ ವಹಿಸಿಕೊಂಡ ಸಂಸ್ಥೆಯ ಉಪಾಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಸಂಸ್ಥೆಯ ಉಪಾಧ್ಯಕ್ಷ ಪಿ.ಕಿಶನ್ ಹೆಗ್ಡೆ ಉಪಸ್ಥಿತ ರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳಾಡಿ ಕಾರ್ಯಕ್ರಮ ನಿರೂಪಿಸಿದರು.ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.







