ವಿಜಯೋತ್ಸವದ ಹೆಸರಲ್ಲಿ ಅತಿರೇಕಕ್ಕೆ ಅವಕಾಶ ಬೇಡ: ಖಾದರ್

ಮಂಗಳೂರು, ಮೇ 17: ವಿಜಯೋತ್ಸವದ ನೆಪದಲ್ಲಿ ಯಾರೂ ಕೂಡಾ ಅತಿಕ್ರಮಣ ಎಸಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದುದು ಬೇಡ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.
ದ.ಕ.ಜಿಲ್ಲೆಯ ಕೆಲವು ಕಡೆ ವಿಜಯೋತ್ಸವದ ಸಂದರ್ಭ ಮನೆ, ಪ್ರಾರ್ಥನಾಲಯಗಳ ಮೇಲೆ ನಡೆಸಿದ ಹಾನಿಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಕರಣದ ಬಗ್ಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಈಗಾಗಲೆ ಚರ್ಚಿಸಿದ್ದೇನೆ. ಭಯದ ವಾತಾವರಣದಲ್ಲಿರುವವರಿಗೆ ಸೂಕ್ತ ರಕ್ಷಣೆ ನೀಡಲು ಸೂಚಿಸಿದ್ದೇನೆ ಎಂದರು.
ಜಿಲ್ಲೆಯ ಜನರು ಕೂಡಾ ಯಾವುದೇ ಗಾಳಿ ಸುದ್ದಿಗೆ ಕಿವಿ ಕೊಡದೆ ಶಾಂತಿ ಸೌಹಾರ್ದ ನೆಲೆಸಲು ಸಹಕರಿಸಬೇಕು ಎಂದು ಯು.ಟಿ. ಖಾದರ್ ಮನವಿ ಮಾಡಿದ್ದಾರೆ.
Next Story





