Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮರುಕಳಿಸಲಿದೆಯೇ 2008?

ಮರುಕಳಿಸಲಿದೆಯೇ 2008?

ವಾರ್ತಾಭಾರತಿವಾರ್ತಾಭಾರತಿ18 May 2018 12:00 AM IST
share
ಮರುಕಳಿಸಲಿದೆಯೇ 2008?

ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿಯ ಪಾಲಿಗೆ 2008 ಮರುಕಳಿಸಿದೆ. ಅಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಹೆಗಲ ಮೇಲೆ ಹಾಕಿಕೊಂಡ ಅದೇ ಹಸಿರು ಶಾಲನ್ನು ಮತ್ತೆ ಹೆಗಲಿಗೆ ಹಾಕಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಂದು ಬಿಜೆಪಿ ಪಡೆದ 110 ಸ್ಥಾನಗಳೊಂದಿಗೆ ಅವರು ಪ್ರಮಾಣ ವಚನ ಸ್ವೀಕರಿಸಿದ್ದರೆ, ಇಂದು 104 ಸ್ಥಾನಗಳನ್ನು ಮುಂದಿಟ್ಟುಕೊಂಡು ಸರಕಾರ ರಚನೆ ಮಾಡಲು ಹೊರಟಿದ್ದಾರೆ. 2008ರಲ್ಲಿ ಬಿಜೆಪಿಗೆ ಸರಕಾರ ರಚನೆ ಮಾಡಲು ಬರೀ 3 ಸ್ಥಾನಗಳ ಕೊರತೆಯಿತ್ತು. ಜೊತೆಗೆ ಕಾಂಗ್ರೆಸ್ ಅಥವಾ ಜೆಡಿಎಸ್ ಸರಕಾರ ರಚನೆಗೆ ಆಸಕ್ತಿ ತೋರಿಸಿರಲಿಲ್ಲ. ತನ್ನ ಸರಕಾರವನ್ನು ಸುಭದ್ರಗೊಳಿಸಲು ಅದು ಬಹಿರಂಗವಾಗಿ ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ಕೊಂಡುಕೊಳ್ಳತೊಡಗಿತು ಮತ್ತು ಅದನ್ನು ರಾಜಕೀಯ ತಂತ್ರ, ಚಾಣಕ್ಷತೆ ಎಂದೆಲ್ಲ ಮಾಧ್ಯಮಗಳು ಬಣ್ಣಿಸಿದವು. 'ಆಪರೇಷನ್ ಕಮಲ' ಎಂಬ ವಿಶೇಷ ನಾಮಕರಣದ ಮೂಲಕ ಗೆದ್ದ ಅಭ್ಯರ್ಥಿಗಳನ್ನು ಕೋಟಿಗಟ್ಟಲೆ ಹಣ ಕೊಟ್ಟು ಖರೀದಿಸಿ, ಅವರಿಂದ ರಾಜೀನಾಮೆ ನೀಡಿಸುವುದೂ ರಾಜಕೀಯ ತಂತ್ರದ ಭಾಗ ಎಂದು ಕರೆಯಲ್ಪಟ್ಟಿತು. ಒಂದು ರೀತಿಯಲ್ಲಿ ಪ್ರಜಾಸತ್ತೆಯನ್ನೇ ಅದು ಹಣದ ಮೂಲಕ ಕೊಂಡು ಕೊಂಡಿತ್ತು. ಜನರು ತಮ್ಮ ಮತಗಳನ್ನು ನೀಡಿ ಅಭ್ಯರ್ಥಿಯನ್ನು ಆರಿಸಿದರೆ, ಆ ಅಭ್ಯರ್ಥಿಯನ್ನು ಬಿಜೆಪಿ ಹಣದಿಂದ ಕೊಂಡುಕೊಳ್ಳುತ್ತದೆ ಅಂದರೆ ಪರೋಕ್ಷವಾಗಿ ಅದು ಮತದಾರ ರನ್ನೇ ಹಣದಿಂದ ಕೊಂಡುಕೊಂಡಂತೆ.

ಅಂದು ಬಿಜೆಪಿ ಸರಕಾರ ರಚನೆಯಲ್ಲಿ ರೆಡ್ಡಿ ಸಹೋದರರ ಹಣ ಮಹತ್ವದ ಪಾತ್ರವನ್ನು ವಹಿಸಿತ್ತು. ಆ ಕಾರಣದಿಂದ ರೆಡ್ಡಿ ಸಹೋದರರು ರಾಜ್ಯ ಸರಕಾರವನ್ನು ನಿಯಂತ್ರಿಸತೊಡಗಿದರು. ಪರಿಣಾಮವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ, ರೆಡ್ಡಿ ಸಹೋದರರು ಸರಕಾರದ ಸೂತ್ರಧಾರರಾದರು. ಯಾವ ರೆಡ್ಡಿಗಳ ಕಾರಣದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೋ, ಅದೇ ರೆಡ್ಡಿಗಳ ದೆಸೆಯಿಂದ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ರಾಜ್ಯದ ಪಾಲಿಗೆ ಅಂದಿನ ಬಿಜೆಪಿ ಸರಕಾರ ಒಂದು ದುಃಸ್ವಪ್ನವಾಗಿದೆ. ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳು ಎರಡು ಉಪಮುಖ್ಯಮಂತ್ರಿಗಳನ್ನು ರಾಜ್ಯ ಸಹಿಸಿಕೊಂಡಿತು. ಭಿನ್ನಮತಗಳಿಂದಾಗಿಯೇ ಸುದ್ದಿಯಲ್ಲಿರುತ್ತಿದ್ದ ಸರಕಾರಕ್ಕೆ ಆಡಳಿತ ನಡೆಸಲು ಅವಕಾಶವೇ ಇದ್ದಿರಲಿಲ್ಲ. ಪರಿಣಾಮವಾಗಿ ತದನಂತರದ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಬಿಜೆಪಿ ಸೋತಿತು. ಇದೀಗ ರಾಜ್ಯದಲ್ಲಿ ಇತಿಹಾಸ ಮರುಕಳಿಸಿದೆ. 2008ರ ಸ್ಥಿತಿಗೆ ಹೋಲಿಸಿದರೆ, ಬಿಜೆಪಿ ಸ್ಥಿತಿ ಇನ್ನಷ್ಟು ಅತಂತ್ರದಲ್ಲಿದೆ. ಈ ಬಾರಿ ಬಹುಮತಕ್ಕೆ 10 ಅಭ್ಯರ್ಥಿಗಳ ಬೆಂಬಲ ಬೇಕಾಗಿದೆ. ಮುಖ್ಯವಾಗಿ, ಚುನಾವಣೆಯ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗುವ ಮೊದಲೇ ಕಾಂಗ್ರೆಸ್-ಜೆಡಿಎಸ್ ಒಂದಾಯಿತು. ಬಿಜೆಪಿಯನ್ನು ಸರಕಾರ ನಡೆಸುವುದರಿಂದ ದೂರ ಇಡುವ ಒಂದೇ ಉದ್ದೇಶದಿಂದ, ಕಾಂಗ್ರೆಸ್ ಮುಕ್ತವಾದ ಬೆಂಬಲವನ್ನು ಜೆಡಿಎಸ್‌ಗೆ ನೀಡಿತು. ಬರೀ 37 ಸ್ಥಾನಗಳನ್ನು ಹೊಂದಿರುವ ಜೆಡಿಎಸ್‌ಗೆಮುಖ್ಯಮಂತ್ರಿ ಸ್ಥಾನ ನೀಡುವಲ್ಲಿ ಅದು ಹಿಂಜರಿಕೆ ತೋರಿಸಲಿಲ್ಲ.

ಸಿದ್ದರಾಮಯ್ಯ ಸೇರಿದಂತೆ ಎಲ್ಲ ನಾಯಕರು ತಮ್ಮ 'ಪ್ರತಿಷ್ಠೆ'ಗಳನ್ನೆಲ್ಲ ಬದಿಗಿಟ್ಟು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿಸಲು ಹೊರಟಿದ್ದು ಪ್ರಬುದ್ಧ ರಾಜಕಾರಣವಾಗಿದೆ. ಅಷ್ಟೇ ಅಲ್ಲ, ಈ ವರೆಗೆ ಚರ್ಚೆಯಲ್ಲಿದ್ದ 'ದಲಿತ ಮುಖ್ಯಮಂತ್ರಿ' ಕೂಗಿಗೂ ಈ ಮೈತ್ರಿಯಲ್ಲಿ ಸಣ್ಣದೊಂದು ಪರಿಹಾರ ಸಿಕ್ಕಿದೆ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಭರವಸೆಯು, ದಲಿತ ನಾಯಕರಿಗೆ ಆದ್ಯತೆ ನೀಡಿದಂತೆಯೂ ಆಯಿತು. ಈಗಾಗಲೇ ಈ ಮೈತ್ರಿಕೂಟ ತಮ್ಮಲ್ಲಿ ಬಹುಮತವಿರುವುದನ್ನು ರಾಜ್ಯಪಾಲರಿಗೆ ತಿಳಿಸಿದೆ. ಆದರೆ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿ ಬಿಜೆಪಿಯನ್ನನು ಸರಕಾರ ರಚಿಸಲು ಆಹ್ವಾನಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಒಂದಾಗದೇ ಇದ್ದಿದ್ದರೆ, ಬಿಜೆಪಿಯನ್ನು ಕರೆಯುವುದು ರಾಜ್ಯಪಾಲರಿಗೆ ಅನಿವಾರ್ಯ ಎನ್ನಬಹುದಿತ್ತು. 2008ರಲ್ಲಿ ಬಿಜೆಪಿಯನ್ನು ಬಹುಮತ ಸಾಬೀತು ಪಡಿಸಲು ಕರೆದಾಗ ಅದಕ್ಕೆ ಯಾರ ಆಕ್ಷೇಪವೂ ಇದ್ದಿರಲಿಲ್ಲ. ಆದರೆ, ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸಹಿ ಹಾಕಿದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಹೀಗಿರುವಾಗ, ಬಿಜೆಪಿ ಬಹುಮತವನ್ನು ಹೇಗೆ ಸಾಬೀತು ಪಡಿಸುತ್ತದೆ ? ಕನಿಷ್ಠ ಐದಕ್ಕಿಂತ ಅಧಿಕ ಪಕ್ಷೇತರರು ಇದ್ದರೆ ಆ ಭರವಸೆಯಿಂದಲಾದರೂ ಬಿಜೆಪಿಗೆ ಅವಕಾಶ ನೀಡಬಹುದು. ಆದರೆ ಇಲ್ಲಿ, ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಶಾಸಕರೇ ಇಲ್ಲ. ಹೀಗಿದ್ದರೂ ಬಿಜೆಪಿಗೆ ಅವಕಾಶ ನೀಡಲಾಗಿದೆ ಎಂದರೆ ಅದರ ಅರ್ಥವೇನು?

ಬಿಜೆಪಿ ಇತರ ಪಕ್ಷಗಳ ಶಾಸಕರನ್ನು ಕೊಂಡುಕೊಂಡು ಸರಕಾರ ರಚಿಸುವುದಕ್ಕೆ ರಾಜ್ಯಪಾಲರೇ ಅನುಮತಿ ನೀಡಿದ್ದಾರೆ ಎಂದಲ್ಲವೇ? ಹಣದಿಂದ ಇತರ ಶಾಸಕರನ್ನು ಕೊಂಡುಕೊಳ್ಳುವುದು, ಕೋಟಿಗಟ್ಟಲೆ ಹಣವನ್ನು ನೀಡಿ ಅವರ ಕೈಯಲ್ಲಿ ರಾಜೀನಾಮೆಯನ್ನು ಕೊಡಿಸುವುದು ಇವೆಲ್ಲವೂ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗ ಎಂದು ರಾಜ್ಯಪಾಲರೇ ಘೋಷಿಸಿದಂತಾಗಲಿಲ್ಲವೇ? ಶುಕ್ರವಾರ ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಪು ನೀಡಲಿದೆಯಾದರೂ ಅದರ ಕುರಿತಂತೆಯೂ ವಿಶೇಷ ಭರವಸೆಯಿಲ್ಲ. ಈ ಹಿಂದೆ ಗೋವಾ ಮತ್ತು ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದರೂ, ಬಿಜೆಪಿ ಮೈತ್ರಿ ಪಕ್ಷಗಳಿಗೆ ಸರಕಾರ ರಚಿಸಲು ಸುಪ್ರೀಂ ಅನುಮತಿಸಿತ್ತು ಇದೀಗ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಕಾಂಗ್ರೆಸ್-ಜೆಡಿಎಸ್ ಬಹುಮತವಿರುವಾಗ ಬಿಜೆಪಿಗೆ ಸುಪ್ರೀಂಕೋರ್ಟ್ ಅನುಮತಿ ನೀಡುತ್ತದೆಯೇ? ಸುಪ್ರೀಂಕೋರ್ಟ್ ಸದ್ಯದ ದಿನಗಳಲ್ಲಿ ಸರಕಾರದ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿರುವುದರಿಂದ ಅದರಿಂದ ನ್ಯಾಯವನ್ನು ನಿರೀಕ್ಷಿಸುವುದು ಕಷ್ಟ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅಂತರ ಕಾಯ್ದುಕೊಳ್ಳುವ ಸಾಧ್ಯತೆಗಳಿವೆ ಅಥವಾ ಈ ಹಿಂದಿನ ಪ್ರಕರಣಗಳಲ್ಲಿ ತನ್ನ ತೀರ್ಪನ್ನು ಪರಿಗಣಿಸಿ, ಬಿಜೆಪಿ ಸರಕಾರ ರಚನೆ ಮಾಡಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮುಖ ಉಳಿಸಿಕೊಳ್ಳಲೂ ಬಹುದು.

ಒಟ್ಟಿನಲ್ಲಿ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದ ರೆಡ್ಡಿ ಸಹೋದರರು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಬಿಜೆಪಿಯ ಪಾಲಿಗೆ ಇದು ಭವಿಷ್ಯದಲ್ಲಿ ಖಂಡಿತವಾಗಿಯೂ ಮಾರಕವಾಗ ಲಿದೆ. ಇಂದು ಬಿಜೆಪಿಯ ಮಾರುಕಟ್ಟೆಯಲ್ಲಿ ಒಬ್ಬ ಶಾಸಕ ನೂರು ಕೋಟಿ ರೂ. ಬೆಲೆಬಾಳುತ್ತಾನೆ ಎಂಬ ವದಂತಿಗಳಿವೆ. 500 ಕೋಟಿ ರೂ.ಗೂ ಅಧಿಕ ರೂಪಾಯಿಗಳನ್ನು ಶಾಸಕರಿಗಾಗಿ ಚೆಲ್ಲಬೇಕು? ಇಷ್ಟು ಹಣ ಬಿಜೆಪಿಯ ಬಳಿ ಇದೆ ಎಂದರೆ ಏನು ಅರ್ಥ? ನೋಟು ನಿಷೇಧದ ಬಳಿಕವೂ ಕಪ್ಪು ಹಣ ಬರಲಿಲ್ಲ ಎಂದು ಆರ್‌ಬಿಐ ಹೇಳುತ್ತದೆ. ಹಾಗಾದರೆ ಈ ಹಣವೆಲ್ಲ ಯಾರ ಬಳಿ ಸೇರಿಕೊಂಡಿದೆ ಎನ್ನುವುದನ್ನು ಊಹಿಸಲು ಕಷ್ಟವಿದೆಯೇ? ಇಂದು ಶ್ರೀಸಾಮಾನ್ಯ ನೋಟುಗಳಿಲ್ಲದೆ ಎಟಿಎಂನ ಮುಂದೆ ಹತಾಶನಾಗಿ ನಿಂತಿದ್ದಾನೆ. ಇದೇ ಸಂದರ್ಭದಲ್ಲಿ ಬಿಜೆಪಿ ನೂರಾರು ಕೋಟಿ ರೂಪಾಯಿಗಳನ್ನು ಚೆಲ್ಲಿ ಕುದುರೆ ವ್ಯಾಪಾರಕ್ಕೆ ಹೊರಟಿದೆ. ಈ ಭ್ರಷ್ಟ ಹಣದಿಂದ ಶಾಸಕರನ್ನು ಕೊಂಡುಕೊಂಡು ರಚನೆ ಮಾಡುವ ಸರಕಾರ ಈ ರಾಜ್ಯಕ್ಕೆ ಒಳ್ಳೆಯ ಆಡಳಿತ ನೀಡುತ್ತದೆ ಎಂದು ಭಾವಿಸುವುದೇ ಮೂರ್ಖತನ. ಒಂದು ವೇಳೆ ಸರಕಾರ ರಚನೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾದದ್ದೇ ಆದರೆ, ರಾಜ್ಯದ ಸ್ಥಿತಿ 2008ಕ್ಕಿಂತಲೂ ಅಧ್ವಾನವಾಗಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X