ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿ ಕಾಣೆ
ಮಂಗಳೂರು, ಮೇ 18: ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ರೋಗಿಯೊಬ್ಬರು ಕಾಣೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಗೋಳಿದ ಪಲ್ಕೆ ಮನೆಯ ನಿವಾಸಿ ವಿಶ್ವನಾಥ ಪೂಜಾರಿ (46) ಕಾಣೆಯಾದ ವ್ಯಕ್ತಿ. ಇವರು ಮೇ 14ರಂದು ಸಂಜೆ 4ರಿಂದ ಕಾಣೆಯಾಗಿದ್ದಾರೆ. ಇವರು 5.7 ಅಡಿ ಎತ್ತರ, ಸಪೂರ ಶರೀರ, ಗೋದಿ ಮೈಬಣ್ಣ ಹೊಂದಿದ್ದಾರೆ. ಇವರನ್ನು ಕಂಡಲ್ಲಿ ಮಾಹಿತಿ ನೀಡಲು (0824-2220518) ಪೊಲೀಸರು ತಿಳಿಸಿದ್ದಾರೆ.
Next Story





