ಬೊಜ್ಜು ನಿವಾರಣ ಚಿಕಿತ್ಸಾ ಶಿಬಿರ ಉದ್ಘಾಟನೆ

ಉಡುಪಿ, ಮೇ 18: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ಸ್ವಸ್ಥ ವೃತ್ತ ವಿಭಾಗದ ವತಿಯಿಂದ ಇತ್ತೀಚೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ಎಂಟು ದಿನಗಳ ಕಾಲ ಹಮ್ಮಿ ಕೊಳ್ಳಲಾದ ಸ್ಥೌಲ್ಯ(ಬೊಜ್ಜು) ನಿವಾರಣ ಚಿಕಿತ್ಸಾ ಶಿಬಿರವನ್ನು ಮೇ 17ರಂದು ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ಉದ್ಘಾಟಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಯಾಂತ್ರಿಕ ಜೀವನ ಶೈಲಿಯಿಂದ ಕಾಯಿಲೆ ಗಳು ಸರ್ವೆ ಸಾಮಾನ್ಯವಾಗಿದೆ. ಅನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮದ ಕೊರತೆಯಿಂದ ಶರೀರದಲ್ಲಿ ಕೊಬ್ಬು ಸಂಗ್ರಹವಾಗಿ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಉತ್ಪತ್ತಿ ಯಾಗುತ್ತಿದೆ ಎಂದು ಡಾ.ಶ್ರೀಕಾಂತ್ ಯು. ತಿಳಿಸಿದರು.
ಸ್ವಸ್ಥ ವೃತ್ತ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ದೊಡಮನಿ ಮಾರ್ಗದರ್ಶನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ಚಿಕಿತ್ಸೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಈ ಶಿಬಿರದಲ್ಲಿ ಪಂಚ ಕರ್ಮ, ಆಹಾರ-ವಿಹಾರಗಳ ಕುರಿತು ತಜ್ಞ ವೈದ್ಯರಿಂದ ಮಾಹಿತಿ, ಪಥ್ಯ ಆಹಾರ, ಯೋಗ ತರಬೇತಿ, ಸೌಂದರ್ಯವರ್ಧಕ ಚಿಕಿತ್ಸಾ ವಿಧಾನಗಳನ್ನು ತಿಳಿಸ ಲಾಗುತ್ತದೆ.
ಡಾ.ವಿಜಯ್ ಬಿ.ನೆಗಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಸ್ಪತ್ರೆ ಪ್ರಬಂಧಕ ಶ್ರೀನಿವಾಸ ಹೆಗ್ಡೆ, ಸ್ವಸ್ಥ ವೃತ್ತ ವಿಭಾಗದ ಡಾ.ಯೋಗೀಶ್ ಆಚಾರ್ಯ, ಡಾ.ಸಂದೇಶ್ ಕುಮಾರ್, ಡಾ.ಶ್ರೀನಿಧಿ ಧನ್ಯ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಶ್ಮಿ ಮೊದಲಾದವರು ಉಪಸ್ಥಿತರಿದ್ದರು.







