ಚಿಕ್ಕಮಗಳೂರು: ಕಳ್ಳತನಕ್ಕೆ ಬಂದು ಅಂಗಡಿಗೇ ಬೆಂಕಿ ಇಟ್ಟ ದುಷ್ಕರ್ಮಿಗಳು

ಚಿಕ್ಕಮಗಳೂರು,ಮೇ.18: ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಬಳಿಕ ಅಂಗಡಿಗೇ ಬೆಂಕಿ ಇಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗಡಿಕಲ್ ಗ್ರಾಮದಲ್ಲಿನ ಸುಬ್ರಮಣ್ಯ ಎಂಬುವವರ ಬೀಡಾ ಹಾಗೂ ಸ್ಟೇಷನರಿ ಅಂಗಡಿಯ ರೋಲಿಂಗ್ ಶೆಡ್ ಮುರಿದ ಕಳ್ಳರು ಕ್ಯಾಶ್‍ನಲ್ಲಿದ್ದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಕಳ್ಳತನ ಮಾಡಿ ಅಂಗಡಿಯಿಂದ ಹೋಗುವಾಗ ಅಂಗಡಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ. ಅಂಗಡಿಯೊಳಗಿದ್ದ ಫ್ರಿಡ್ಜ್ ಸೇರಿದಂತೆ ಸುಮಾರು ಎರಡು ಲಕ್ಷ ರೂ. ಬೆಲೆಬಾಳುವ ಸಾಮಾಗ್ರಿಗಳು ನಾಶವಾಗಿವೆ ಎನ್ನಲಾಗಿದೆ.
ಅಂಗಡಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಜಯಪುರ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ತಿಳಿಸಿದ್ದಾರೆ. ಸಿಬ್ಬಂಧಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಅಂಗಡಿ ಸಂಪೂರ್ಣ ನಾಶವಾಗಿದೆ. ಈ ಸಂಬಂಧ ಸುಬ್ರಮಣ್ಯ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story





