ಉಡುಪಿ ಪೊಲೀಸ್ ಕಚೇರಿಯಲ್ಲಿ ರಿಕ್ಷಾ ಚಾಲಕರ ಸಭೆ

ಉಡುಪಿ, ಮೇ 18: ಉಡುಪಿ, ಮಲ್ಪೆ ಮತ್ತು ಮಣಿಪಾಲ ರಿಕ್ಷಾ ಚಾಲಕರ, ಮಾಲಕರ ಮತ್ತು ಸಂಘಟನೆಗಳ ಮುಖ್ಯಸ್ಥರ ಸಭೆಯನ್ನು ಇಂದು ಉಡುಪಿ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ನಡೆಸಲಾಯಿತು.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಜೈಶಂಕರ್, ಚಾಲಕರು ತಮ್ಮ ರಿಕ್ಷಾವನ್ನು ಯಾವ ರೀತಿಯಲ್ಲಿ ಪಾರ್ಕ್ ಮಾಡಬೇಕು, ಯಾವ ವೇಗದಲ್ಲಿ ಚಲಾಯಿಸಬೇಕು, ಸಮವಸ್ತ್ರ ಧರಿಸುವುದು ಸೇರಿದಂತೆ ವಿವಿಧ ಕಾನೂನಾತ್ಮಕ ವಿಚಾರಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ನಗರ ಠಾಣಾಧಿಕಾರಿ ಸುನೀಲ್, ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಲಕ್ಷ್ಮಣ್ ಹಾಗೂ ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು.
Next Story





