ಕಾವ್ರಾಡಿ ಬಳಿ ಸರಣಿ ಅಪಘಾತ: ಹಲವು ಮಂದಿಗೆ ಗಾಯ
ಕುಂದಾಪುರ, ಮೇ 18: ಖಾಸಗಿ ಬಸ್ಸೊಂದು ಮಹೀಂದ್ರ ಬೊಲೇರೋ ಹಾಗೂ ಓಮ್ನಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡ ಘಟನೆ ಮೇ 16ರಂದು ಸಂಜೆ ವೇಳೆ ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆಯ ಗಿರಿಜಾ ಟೈಲ್ಸ್ ಫ್ಯಾಕ್ಟರಿಯ ಬಳಿ ಸಂಭವಿಸಿದೆ.
ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಹೋಗುತ್ತಿದ್ದ ದುರ್ಗಾಂಬ ಬಸ್ ಅಂಪಾರು ಕಡೆಯಿಂದ ತ್ರಾಸಿ ಕಡೆಗೆ ಬರುತ್ತಿದ್ದ ಮಹೀಂದ್ರ ಬೊಲೇರೋ ವಾಹನಕ್ಕೆ ಎದುರುಗಡೆಯಿಂದ ಡಿಕ್ಕಿ ಹೊಡೆದು, ಬಳಿಕ ಬೊಲೇರೋ ಹಿಂದಿ ನಿಂದ ಬರುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಬೊಲೇರೋ ವಾಹನದಲ್ಲಿದ್ದ ಗದಗ ಜಿಲ್ಲೆಯ ಶ್ರೀಮಂತ ಮತ್ತು ಬಸ್ ಹಾಗೂ ಕಾರಿನಲ್ಲಿದ್ದ ಉದಯ, ಅಕ್ಷತಾ, ಲಲಿತಾ, ಸರೋಜ, ಲತಾ, ಸಂಜನ, ಸುಜನಾ ಎಂಬುವರವರು ಗಾಯಗೊಂಡಿದ್ದಾರೆ. ಇದರಲ್ಲಿ ಉದಯ ಮತ್ತು ಅಕ್ಷತಾ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಉಳಿದವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





