ವರದಕ್ಷಿಣೆ ಕಿರುಕುಳ: ದೂರು
ಕುಂದಾಪುರ, ಮೇ 18: ಹೆಚ್ಚಿನ ವರದಕ್ಷಿಣೆ ತರುವಂತೆ ಪತಿಯ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವ ಬಗ್ಗೆ ಕೋಣಿ ಗ್ರಾಮದ ಚಂದ್ರಿಕಾ (29) ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಿಕಾ 2014ರ ಎ.19ರಂದು ಜನ್ನಾಡಿಯ ಗೋಪಾಲ ಮೋಗವೀರ ಎಂಬವರನ್ನು ಮದುವೆಯಾಗಿದ್ದು, ಈ ವೇಳೆ ವರದಕ್ಷಿಣೆಯನ್ನು ನೀಡಿದ್ದರು. ಮದುವೆ ಬಳಿ ಹೆಚ್ಚಿನ ವರದಕ್ಷಿಣೆ ತರುವಂತೆ ಅವರ ಗಂಡ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು, ಈ ಕೃತ್ಯಕ್ಕೆ ಗಂಡನ ಮನೆಯವರಾದ ಸೀತಾ, ಸುಶೀಲಾ, ಕುಶಲ, ಭಾಸ್ಕರ ಪ್ರಚೋದನೆ ನೀಡುತ್ತಿದ್ದರು. ಇದೀಗ ಗಂಡನ ಮನೆಯವರು ಚಂದ್ರಿಕಾ ಹಾಗೂ ಆಕೆಯ ಮಗಳನ್ನು ಮನೆಯಿಂದ ಹೊರಗೆ ಹಾಕಿ ಬೆದರಿಕೆಯೊಡ್ಡಿದ್ದಾರೆ ಎಂದು ದೂರಲಾಗಿದೆ.
Next Story





