ಬೆಂಗಳೂರು: ಲಾರಿ ಢಿಕ್ಕಿ; ಬೈಕ್ ಹಿಂಬದಿ ಸವಾರ ಮೃತ್ಯು

ಬೆಂಗಳೂರು, ಮೇ 18: ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದು ಬೈಕ್‌ನ ಹಿಂಬದಿ ಸವಾರ ಮೃತಪಟ್ಟಿರುವ ದುರ್ಘಟನೆ ಯಲಹಂಕ ವೃತ್ತದ ಬಳಿ ನಡೆದಿದೆ.
ನಗರದ ಗೊಲ್ಲರಹಟ್ಟಿಯ ಮಾನ್‌ಸಿಂಗ್ (25) ಮೃತಪಟ್ಟಿರುವ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.
ರಾಜಸ್ತಾನ ಮೂಲದ ಮಾನ್‌ಸಿಂಗ್, ಕೆಲಸ ಮುಗಿಸಿಕೊಂಡು ಗುರುವಾರ ರಾತ್ರಿ 8:50ರ ವೇಳೆ ಮುಕೇಶ್ ಎಂಬುವರ ಬೈಕ್‌ನಲ್ಲಿ ಹಿಂದೆ ಕುಳಿತುಕೊಂಡು ಮನೆಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ಯಲಹಂಕ ವೃತ್ತದ ಬಳಿ ಏಕಾಏಕಿ ಹಿಂದಿನಿಂದ ಬಂದ ಲಾರಿಯನ್ನು ಚಾಲಕ ನಿಲ್ಲಿಸಲು ಯತ್ನಿಸಿದನಾದರೂ ಬ್ರೇಕ್ ವೈಫಲ್ಯದಿಂದ ಮುನ್ನುಗ್ಗಿ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಕೆಳಗೆ ಬಿದ್ದ ಹಿಂಬದಿ ಸವಾರ ಮಾನ್‌ಸಿಂಗ್ ಮೇಲೆ ಚಕ್ರ ಹರಿದು ಮೃತಪಟ್ಟರೆ. ಮುಂದೆ ಹಾರಿ ಬಿದ್ದ ಮುಕೇಶ್ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿರುವ ಯಲಹಂಕ ಸಂಚಾರ ಪೊಲೀಸರು ಲಾರಿ ಚಾಲಕ ಪನ್ನೀರ್‌ಸೆಲ್ವಂನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
Next Story





