ದಾರಿ ಕೇಳುವ ನೆಪದಲ್ಲಿ ಚಿನ್ನದ ಸರ ಎಗರಿಸಿ ಪರಾರಿ
ಮಂಗಳೂರು, ಮೇ 18: ದಾರಿ ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಕುತ್ತಿಗೆಗೆ ಕೈ ಹಾಕಿ ಸುಮಾರು 55 ಸಾವಿರ ರೂ. ಮೌಲ್ಯದ ಸುಮಾರು 2 ಪವನ್ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ರಥಬೀದಿ ನಿವಾಸಿ ರಘುವೀರ್ ಶೆಣೈ ಚಿನ್ನ ಕಳೆದುಕೊಂಡಿರುವ ವ್ಯಕ್ತಿ. ಇವರು ಶುಕ್ರವಾರ ಮಧ್ಯಾಹ್ನ ಸಿಟಿ ಸೆಂಟರ್‌ಗೆ ಹೋಗುತ್ತಿದ್ದಾಗ ವಸಂತ ಮಹಲ್ ಲಾಡ್ಜ್ ಬಳಿಯಿಂದ ಬಂದ ವ್ಯಕ್ತಿಯೋರ್ವ ಇನ್ನೋರ್ವ ದಪ್ಪಗಿನ ವ್ಯಕ್ತಿಯನ್ನು ತೋರಿಸಿ ಅವರು ನಿಮ್ಮನ್ನು ಕರೆಯುತ್ತಿದ್ದಾರೆ ಎಂದಿದ್ದಾನೆ. ದಪ್ಪಗಿನ ವ್ಯಕ್ತಿಯ ಬಳಿಗೆ ರಘುವೀರ್ ಹೋದಾಗ ಆತ ಆಂಗ್ಲ ಭಾಷೆಯಲ್ಲಿ ಮಾತನಾಡಿಸಿ ಫೋರಂ ಮಾಲ್‌ಗೆ ಹೋಗುವ ದಾರಿಯನ್ನು ಕೇಳಿದ್ದಾನೆ. ದಾರಿ ತೋರಿಸುತ್ತಿದ್ದಂತೆಯೇ ಆ ದಪ್ಪಗಿನ ವ್ಯಕ್ತಿಯು ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಬಲಾತ್ಕಾರವಾಗಿ ಎಳೆದು ಪರಾರಿಯಾಗಿದ್ದಾನೆ. ಈ ಬಗ್ಗೆ ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





