ಮುಖ್ಯಮಂತ್ರಿಯಿಂದ ಸಾಲ ಮನ್ನಾ ಭರವಸೆ: ರಾಜ್ಯ ನೇಕಾರ ಮಹಾಸಭಾ ಅಭಿನಂದನೆ
ಬೆಂಗಳೂರು, ಮೇ 18: ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ತಕ್ಷಣ ನೇಕಾರರು ಹಾಗೂ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿರುವುದಕ್ಕೆ ಕರ್ನಾಟಕ ರಾಜ್ಯ ನೇಕಾರ ಮಹಾಸಭಾ ಅಭಿನಂದನೆ ಸಲ್ಲಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಭಾದ ಅಧ್ಯಕ್ಷ ಬಿ.ಎಸ್.ಸೋಮಶೇಖರ್, ರೈತ ಮತ್ತು ನೇಕಾರರು ಸರಕಾರದ ಎರಡು ಕಣ್ಣುಗಳಿದ್ದಂತೆ. ಹೀಗಾಗಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಸಲುವಾಗಿ ಸಾಲ ಮನ್ನಾ ಮಾಡುವ ಸೂಚನೆ ನೀಡಿರುವುದು ಶ್ಲಾಘನೀಯವಾದುದಾಗಿದೆ. ಈ ಮೂಲಕ ಸಾವಿರಾರು ನೇಕಾರರ ಕುಟುಂಬಗಳಿಗೆ ಬೆಳಕು ನೀಡುತ್ತಿದ್ದಾರೆ ಎಂದು ಹೇಳಿದರು.
Next Story





