ಕೊಳ್ಳೇಗಾಲ: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹಿರಿಯ ಕ್ರೀಡಾಪಟುಗಳಿಂದ ಉತ್ತಮ ಸಾಧನೆ

ಕೊಳ್ಳೇಗಾಲ,ಮೇ.18: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕೊಳ್ಳೇಗಾಲ ತಾಲೂಕಿನಿಂದ ಹಿರಿಯ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆದು ಮುಂದಿನ ಸುತ್ತಿಗೆ ಆಯ್ಕೆಗೊಂಡು ಶ್ರೀಲಂಕಾ ದೇಶದಲ್ಲಿ ಸೆಪ್ಟೆಂಬರ್ ತಿಂಗಳು ಜರುಗುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಗಳಿಸಿದ ಪದಕಗಳು: 60 ವರ್ಷ ವಯೋಮಿತಿಯ ಬ್ಯಾಂಕ್ ರಾಚ್ಚಪ್ಪಾಜಿರವರು 100 ಮೀಟರ್ ರಿಲೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ.
70 ವರ್ಷ ವಯೋಮಿತಿಯ ನಿವೃತ್ತ ದೈಹಿಕ ಶಿಕ್ಷಕ ಆರ್.ನಟರಾಜುರವರು ಎತ್ತರ ಜಿಗಿತದಲ್ಲಿ ಚಿನ್ನದ ಪದಕ, ಉದ್ದ ಜಿಗಿತದಲ್ಲಿ ಬೆಳ್ಳಿ ಹಾಗೂ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
75 ವರ್ಷ ವಯೋಮಿತಿಯ ನಿವೃತ್ತ ದೈಹಿಕ ಶಿಕ್ಷಕ ಕೆ.ಮಾದಯ್ಯರವರು 3 ಕೀ.ಮಿ. ನಡಿಗೆಯಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
80 ವರ್ಷ ವಯೋಮಿತಿಯ ಮಹಮ್ಮದ್ ಇಬ್ರಾಹಿಂರವರು ಜಾವಲಿನ್ ಎಸೆತದಲ್ಲಿ ಚಿನ್ನ, ಗುಂಡು ಎಸೆತದಲ್ಲಿ ಬೆಳ್ಳಿ ಹಾಗೂ ಉದ್ದ ಜಿಗಿತದಲ್ಲಿ ಕಂಚಿನ ಪದಕಗಳನ್ನು ಪಡೆದಿರುತ್ತಾರೆ.
ಪದಕಗಳನ್ನು ಪಡೆದ ಕ್ರೀಡಾಪಟುಗಳಿಗೆ ಸಮಾನ ಮನಸ್ಕ ಸಂಘದ ಪದಾಧಿಕಾರಿಗಳಾದ ಉಮಾಶಂಕರ್, ದೊಡ್ಡಲಿಂಗೇಗೌಡ, ಹೊನ್ನಪ್ಪ, ಎಂಜಿಎಸ್‍ವಿ ಕಾಲೇಜಿನ ಪ್ರಾಂಶುಪಾಲ ಮಹದೇ, ಮಹೇಶ್, ಜಯರಾಜಪ್ಪ, ಹಿರಿಯ ಕ್ರೀಡಾಪಟು ನಾಜಿಮ್, ಹಾಗೂ ಪಟ್ಟಣದ ಗೆಳೆಯರ ಬಳಗ, ಕೊಳ್ಳೇಗಾಲ ನಾಗರೀಕರು ಶುಭಕೋರಿ ಅಭಿನಂದಿಸಿದರು.







