ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಕಂಪೆನಿಯಿಂದ 85 ಕೋ. ರೂ. ಮೌಲ್ಯದ ಆಭರಣ ವಶ

ಹೊಸದಿಲ್ಲಿ, ಮೇ 18: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,000 ಕೋ. ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೆಹುಲ್ ಚೋಕ್ಸಿ ಮಾಲಕತ್ವದ ಗೀತಾಂಜಲಿ ಸಮೂಹದಿಂದ 85 ಕೋ. ರೂ. ವೌಲ್ಯದ 34,000ಕ್ಕೂ ಅಧಿಕ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ.
ಸಂಸ್ಥೆ ದುಬೈಯಿಂದ ಈ ಆಭರಣಗಳನ್ನು ತರಿಸಿತ್ತು. ಇದನ್ನು ಹಣ ವಂಚನೆ ತಡೆ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ‘‘ಮೆಹುಲ್ ಚೋಕ್ಸಿ ನಿಯಂತ್ರಿತ ಸಮೂಹ ದುಬೈಯಿಂದ ತಂದ 85 ಕೋ. ರೂ. ವೌಲ್ಯದ 34,000 ಆಭರಣಗಳನ್ನು ಜಾರಿ ನಿರ್ದೇಶನಾಲಯ ಪಿಎಂಎಲ್ ಕಾಯ್ದೆ ಅಡಿ ವಶಪಡಿಸಿಕೊಂಡಿದೆ’’ ಇಡಿಯ ಹೇಳಿಕೆ ತಿಳಿಸಿದೆ.
ದೇಶದ ಅತೀ ದೊಡ್ಡ ವಂಚನೆಯಾಗಿರುವ ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಚೋಕ್ಸಿ, ಅವರ ಸೋದರಳಿಯ ಹಾಗೂ ವಜ್ರೋದ್ಯಮಿ ನೀರವ್ ಮೋದಿ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
Next Story





