ಝುಬೇರ್ ಹಾಜಿ ಬೋಳಾರ
ಮಂಗಳೂರು, ಮೇ 19: ನಗರದ ಬೋಳಾರ ನಿವಾಸಿ ಝುಬೇರ್ ಹಾಜಿ (95) ಶನಿವಾರ ಮಧ್ಯಾಹ್ನ ತನ್ನ ಸ್ವಗೃಹದಲ್ಲಿ ನಿಧರಾದರು.
ಬೋಳಾರ ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಝುಬೇರ್ ಹಾಜಿ ಅವರು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಅವರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಶನಿವಾರ ಮಗ್ರಿಬ್ ನಮಾಝ್ ಬಳಿಕ ಬೋಳಾರ ಜುಮಾ ಮಸೀದಿ ವಠಾರದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story