ಹೆಬ್ರಿ, ಮೇ 19: ಹಾವೇರಿಯಿಂದ ಭತ್ತ ತುಂಬಿಕೊಂಡು ಮುನಿಯಾಲು ಕಾಡುಹೊಳೆಗೆ ಬರುತ್ತಿದ್ದ ಲಾರಿಯೊಂದು ಶನಿವಾರ ಮುಂಜಾನೆ ಹೆಬ್ರಿಯ ಜರ್ವತ್ತು ಸೇತುವೆ ಬಳಿಯ ತಿರುವಿನಲ್ಲಿ ಉರುಳಿ ಬಿದ್ದಿದೆ.
ಘಟನೆಯ ವೇಳೆ ಲಾರಿಯಲ್ಲಿದ್ದ ಚಾಲಕ ಮತ್ತು ನಿರ್ವಾಹಕರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.