ಝುಲೇಖಾ ನರ್ಸಿಂಗ್ ಕಾಲೇಜಿನ ಪದವಿ ಪ್ರಧಾನ, ವಾರ್ಷಿಕ ದಿನಾಚರಣೆ
ಮಂಗಳೂರು, ಮೇ.19: ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯ ಅಂಗ ಸಂಸ್ಥೆಯಾದ ನಗರದ ಬೀಬಿ ಅಲಾಬಿ ರಸ್ತೆ ಬಳಿ ಇರುವ ಝುಲೇಖಾ ನರ್ಸಿಂಗ್ ಕಾಲೇಜಿನ ಪದವಿ ಪ್ರಧಾನ ಮತ್ತು ವಾರ್ಷಿಕ ದಿನಾಚರಣೆ ಮೇ 17ರಂದು ಕಾಲೇಜಿನ ಅಧ್ಯಕ್ಷ ಹಾಗೂ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಶ್ರೀಕಾಂತ್ ಬಿ ಫುಲಾರಿ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಾ, ರೋಗಿಗಳ ಆರೈಕೆಯಲ್ಲಿ ದಾದಿಯರ ಪಾತ್ರ ಪ್ರಮುಖ .ವೃತ್ತಿಪರ ನರ್ಸಿಂಗ್ ಪದವಿಧರರಿಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ನರ್ಸಿಂಗ್ ಕ್ಷೇತ್ರದಲ್ಲಿರುವವರು ತಮ್ಮ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಉನ್ನತ ಶಿಕ್ಷಣವನ್ನು ಪಡೆದು ಕೊಂಡು ಜ್ಞಾನ ವೃದ್ಧಿಸಿಕೊಳ್ಳ ಬೇಕು ಎಂದು ಶ್ರೀಕಾಂತ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡುತ್ತಾ, ಆಧುನಿಕ ವೈದ್ಯಕೀಯ ಸೌಲಭ್ಯವನ್ನು ಬಳಸಿಕೊಂಡು ನರ್ಸಿಂಗ್ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವ ಜ್ಞಾನ ಪಡೆಯುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ಝುಲೇಖಾ ನರ್ಸಿಂಗ್ ಕಾಲೇಜ್ ಮತ್ತು ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮುಹಮ್ಮದ್ ತಾಹಿರ್ ಶುಭ ಹಾರೈಸಿದರು.ಪ್ರಾಂಶುಪಾಲೆ ಡಾ.ಆರ್.ಕನಗವಲ್ಲಿ ವಾರ್ಷಿಕ ವರದಿ ವಾಚಿಸಿದರು. ಉಪ ಪ್ರಾಮಶುಪಾಲೆ ಲಿಗಿಯಾ ವಿ.ಹಾಲ್ದಾರ್ ಸ್ವಾಗತಿಸಿದರು. ಪ್ರೊ.ಜಿ.ಪ್ರತಿಭಾ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ನಿರ್ವಹಿಸಿದರು. ಸೋನಿಯಾ ಸಿಕ್ವೇರಾ ವಂದಿಸಿದರು.







