ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ, ಹಲ್ಲೆ; ದೂರು
ಬೆಳ್ತಂಗಡಿ, ಮೇ 19: ಜಾಗದಲ್ಲಿ ನೀರು ಹರಿಯುವ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಮನೆಗಳ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ಮಾಡಿಕೊಂಡ ಪ್ರಕರಣ ಬೆಳ್ತಂಗಡಿ ಠಾಣೆಯಲ್ಲಿ ಶನಿವಾರ ದಾಖಲಾಗಿದೆ.
ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಗಂಗಾದರಪ್ಪ ಎಂಬವರು ಉಜಿರೆ ನಿವಾಸಿ ರಘುರಾಮ ಶೆಟ್ಟಿ ಎಂಬವರ ಮನೆಯಂಗಳಕ್ಕೆ ಉದ್ದೇಶ ಪೂರ್ವಕವಾಗಿ ನೀರು ಹರಿಸುತ್ತಿರುವ ವಿಷಯಕ್ಕೆ ರಘುರಾಮ ಶೆಟ್ಟಿ ಪ್ರಶ್ನಿಸಲು ಹೋದಾಗ ಗಂಗಾದರಪ್ಪ ರಘುರಾಮ ಶೆಟ್ಟಿ ಮತ್ತು ಪತ್ನಿಯ ಮೇಲೆ ಹಲ್ಲೆಗೈದಿದ್ದು ಇದಕ್ಕೆ ಪ್ರತಿಯಾಗಿ ರಘುರಾಮ ಶೆಟ್ಟಿಯವರು ಹಲ್ಲೆಗೈದ ಘಟನೆ ನಡೆದಿದೆ. ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೂರು : ನನ್ನ ಪತ್ನಿ ಹಾಗೂ ನಾನು ಉದ್ದೇಶಪೂರ್ವಕವಾಗಿ ಮನೆಯಂಗಳಕ್ಕೆ ನೀರು ಹಾಯಿಸುತ್ತಿರುವುದನ್ನು ಪ್ರಶ್ನಿಸಿದಾಗ ಗಂಗಾಧರಪ್ಪ ಎಂಬವರು ನನ್ನ ಪತ್ನಿಯ ಮೇಲೆ ಹಲ್ಲೆಗೈದಿದ್ದು ಹಾಗೂ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ರಘುರಾಮ ಶೆಟ್ಟಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿದೂರು : ನನ್ನ ಮೇಲೆ ರಘುರಾಮ ಶೆಟ್ಟಿ ಎಂಬವರು ಹಲ್ಲೆಗೈದಿದ್ದು ಯಾವ ವಿಷಯಕ್ಕಾಗಿ ಹೈಲ್ಲೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾಗ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಗಂಗಾಧರಪ್ಪ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ದಲಿತ ದೌರ್ಜನ್ಯ ಪ್ರಕರಣ ಹಾಗೂ ಮಹಿಳೆಯರ ಮೇಲೆ ಹಲ್ಲೆ ಪ್ರಕರಣ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದೆ.







