ಪಡುಬಿದ್ರೆ: ಮನೆಗೆ ನುಗ್ಗಿ ನಗ-ನಗದು ಕಳವು
ಪಡುಬಿದ್ರೆ, ಮೇ 20: ಯಾರು ಇಲ್ಲದ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗು ನಗದು ಕಳವು ಗೈದ ಘಟನೆ ನಡೆದಿದೆ.
ಪಡುಬಿದ್ರೆಯ ನಾಗರಾಜ ನಗರದ ಪ್ರೈವೆಟ್ ರೋಡ್ ನಿವಾಸಿ ಶಮೀಮಾ ಸುಲೈಮಾನ್ ಎಂಬವರ ಮನೆಗೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ಕಪಾಟನ್ನು ಜಾಲಾಡಿ ಅದರಲ್ಲಿದ್ದ ಒಂದು ಬ್ರಾಸ್ಲೇಟ್, ಚಿನ್ನದ ಎರಡು ಎರಡು ಬಳೆ, ಉಂಗುರ 2 ಸೇರಿ ಒಟ್ಟು 6.5 ಪವನ್ ಚಿನ್ನ ಹಾಗು 30 ಸಾವಿರ ನಗದು ಕಳವು ಮಾಡಿದ್ದಾರೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story