ಜೂ. 13 ರಂದು ಅಂಚೆ ಅದಾಲತ್
ಮಂಗಳೂರು, ಮೇ 20: ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಬಲ್ಮಠದಲ್ಲಿ ತ್ರೈಮಾಸಿಕ ಅಂಚೆ ಅದಾಲತ್ ಜೂ.13ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಸಾರ್ವಜನಿಕರು ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳೇನಾದರೂ ಇದ್ದಲ್ಲಿ ಅಂಚೆ ಅದಾಲತ್ ತಲೆ ಬರಹದಡಿಯಲ್ಲಿ ಜೂನ್ 8ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಬಲ್ಮಠ, ಮಂಗಳೂರು-575002 ಈ ವಿಳಾಸಕ್ಕೆ ಕಳುಸುಹಿವಂತೆ ಪ್ರಕಟನೆ ತಿಳಿಸಿದೆ.
Next Story





