Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎಂಒ 4 ಭತ್ತದ ಬೀಜದ ಕೊರತೆ: ಕರಾವಳಿ...

ಎಂಒ 4 ಭತ್ತದ ಬೀಜದ ಕೊರತೆ: ಕರಾವಳಿ ರೈತರಲ್ಲಿ ಆತಂಕ

ವಾರ್ತಾಭಾರತಿವಾರ್ತಾಭಾರತಿ20 May 2018 8:30 PM IST
share

ಉಡುಪಿ, ಮೇ 20: ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಕರಾವಳಿ ಮುಂಗಾರಿಗೆ ಸೂಕ್ತವಾಗಿರುವ ಎಂಒ 4 ಭತ್ತದ ಬಿತ್ತನೆ ಬೀಜದ ಕೊರತೆ ಎದು ರಾಗಿದ್ದು, ಇದು ಕರಾವಳಿಯ ರೈತರಲ್ಲಿ ಆತಂಕ ಸೃಷ್ಠಿಸಿದೆ.

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಸುಮಾರು 45 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ಮಾಡುವ ಗುರಿ ಹೊಂದಿದ್ದು, 2500 ಕ್ವಿಂಟಾಲ್ ಎಂಒ 4ಗೆ ಬೇಡಿಕೆ ಬಂದಿದೆ. ಆದರೆ ಈ ಬಾರಿ 600 ಕ್ವಿಂಟಾಲ್ ಮಾತ್ರವೇ ಪೂರೈಕೆಯಾಗಿದ್ದು 1400 ಕ್ವಿಂಟಾಲ್ ಬೀಜದ ಕೊರತೆ ಉಂಟಾಗಿದೆ.

ವಿವಿಧೆಡೆ ಬೆಳೆಯುವ ನಾನಾ ತಳಿಗಳನ್ನು ಕರ್ನಾಟಕ ಬೀಜ ನಿಗಮ ಖರೀದಿಸಿ ಅಲ್ಲಿಂದ ಜಿಲ್ಲೆಯ ರೈತ ಸಂಪರ್ಕ ಕೇಂದ್ರಕ್ಕೆ ಹಂಚಿ ವಿತರಿಸ ಲಾಗುತ್ತದೆ. ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಹೋಬಳಿಯ 9 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಯಾಗಲಿದೆ. ಸದ್ಯ 350 ಕ್ವಿಂಟಾಲ್ ಎಂಒ 4 ಬಿತ್ತನೆ ಬೀಜವನ್ನು ಕಾರ್ಕಳ, ಅಜೆಕಾರು, ಬ್ರಹ್ಮಾವರ, ಕೋಟ, ಬೈಂದೂರು, ವಂಡ್ಸೆ ರೈತ ಸಂಪರ್ಕ ಕೇಂದ್ರಗಳಿಗೆ ಹಂಚಿಕೆ ಮಾಡ ಲಾಗಿದೆ.

ಮುಂಗಾರಿನ ಕೊರತೆ: ಶಿವಮೊಗ್ಗದಲ್ಲಿ ಅಣೆಕಟ್ಟುಗಳ ನೀರನ್ನು ಆಧಾರಿಸಿ ಎಂಒ4 ಬಿತ್ತನೆ ಬೀಜ ವನ್ನು ಬೆಳೆಸಲಾಗುತ್ತಿದ್ದು, ಕಳೆದ ಬಾರಿ ಮುಂಗಾರಿನ ಕೊರತೆಯಿಂದ ಶಿವಮೊಗ್ಗ ದಲ್ಲಿ ನೀರಿನ ಅಭಾವ ಎದುರಾಗಿತ್ತು. ನೀರಿನ ಅಭಾವದಿಂದ ಅಲ್ಲಿನ ರೈತರು ಈ ಬೆಳೆಯನ್ನು ಬೆಳೆಸಲು ಮುಂದಾಗಿರಲಿಲ್ಲ. ಇದರ ಪರಿಣಾಮದಿಂದ ಬೀಜದ ಕೊರತೆ ತಲೆದೋರಿದೆ.

ಎಂಒ 4 ಬಿತ್ತನೆ ಬೀಜವು 135 ದಿನಗಳಲ್ಲಿ ಉತ್ತಮ ಇಳುವರಿ ನೀಡುವ ತಳಿ. ಕರಾವಳಿಯ ಮುಂಗಾರಿಗೆ ಸೂಕ್ತವಾಗಿರುವ ಈ ಬಿತ್ತನೆ ಬೀಜದ ಕೊರತೆ ಈ ಬಾರಿ ರೈತರನ್ನು ಕಾಡುತ್ತಿದೆ. ಒಂದು ಎಕರೆಗೆ 25 ಕೆ.ಜಿ. ಎಂಒ 4 ಬಿತ್ತನೆ ಬೀಜದ ಅವಶ್ಯವಿದ್ದು, 18ರಿಂದ 19 ಕ್ವಿಂಟಾಲ್ ಇಳುವರಿ ತೆಗೆಯಲು ಸಾಧ್ಯ ವಿದೆ. 135 ದಿನಗಳಲ್ಲಿ ಬೀಜದಿಂದ ಹೊಸ ಬೀಜ ಉತ್ಪಾದನೆ ಮಾಡಬಹು ದಾಗಿದೆ. ಎಂಒ 4 ಬಿತ್ತನೆ ಬೀಜದಿಂದ ಹೊಸ ಬೀಜ ಉತ್ಪಾದಿಸಿ 3 ವರ್ಷಕ್ಕೆ ಬಳಸಿಕೊಳ್ಳಬಹುದು.

‘ಕರಾವಳಿಯ ಬಹುತೇಕ ಮಂದಿ ಕೆಂಪಕ್ಕಿಯನ್ನು ಇಷ್ಟಪಡುವುದರಿಂದ ಎಂಒ 4 ತಳಿಯನ್ನೇ ರೈತರು ಮೆಚ್ಚಿಕೊಂಡಿದ್ದಾರೆ. ಈ ತಳಿಯಲ್ಲಿ ಅಧಿಕ ಇಳುವರಿ ಬರುವುದರಿಂದ ಕರಾವಳಿ ರೈತರು ಈ ಬೆಳೆಗೆ ಒಗ್ಗಿಕೊಂಡಿದ್ದಾರೆ. ಕೃಷಿ ಇಲಾಖಾ ಧಿಕಾರಿಗಳು ಕೊನೆಯ ಹಂತದಲ್ಲಿ ಬೀಜದ ಅಭಾವದ ಬಗ್ಗೆ ಮಾಹಿತಿ ನೀಡಿರುವುದರಿಂದ ಸಮಸ್ಯೆಯಾಗಿದೆ’ ಎಂದು ರೈತರು ದೂರಿದ್ದಾರೆ.

ಜಿಲ್ಲೆಯ ರೈತರ ಬೇಡಿಕೆಗೆ ಬೇಕಾದಷ್ಟು ಎಂಒ 4 ತಳಿ ದಾಸ್ತಾನು ಇಲ್ಲದ್ದರೂ ಪರ್ಯಾಯವಾಗಿ 131 ದಿನಗಳಲ್ಲಿ ಕಟಾವಿಗೆ ಬರುವ ಎಂಒ 16(350 ಕ್ವಿಂಟಾಲ್), 105 ದಿನಗಳಲ್ಲಿ ಕಟಾವು ಮಾಡುವ ಜ್ಯೋತಿ, ಜಯ ತಳಿ ಲಭ್ಯ ವಿದೆ. ಈ ಬಾರಿ ಎಂಒ 4 ತಳಿಯ ಉತ್ಪಾದನೆಯೆ ಕಡಿಮೆಯಾಗಿದ್ದು ಬೇಡಿಕೆ ಹೆಚ್ಚಾಗಿದೆ. ಇದರಿಂದ ಬೀಜದ ಅಭಾವ ಎದುರಾಗಿದೆ ಎಂದು ಉಡುಪಿ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X