ಆಳ್ವಾಸ್‌ಗೆ ಅಖಿಲ ಭಾರತ ಮಹಿಳಾ ಬಾಲ್‌ಬ್ಯಾಡ್ಮಿಂಟನ್ ಚ್ಯಾಂಪಿಯನ್‌ಶಿಪ್

ಮೂಡುಬಿದಿರೆ, ಮೇ 20: ತಮಿಳುನಾಡಿನ ತಿರುಚ್ಚಿ ಆರೋಕ್ಯ ಮಾತಾ ಗ್ರೌಂಡ್‌ನಲ್ಲಿ ರಾಜಗೋಪಾಲನ್ ಸ್ಮಾರಕ ಬಾಲ್‌ಬ್ಯಾಡ್ಮಿಂಟನ್ ಅಕಾಡಮಿ ಮತ್ತು ತಮಿಳುನಾಡು ಬಾಲ್‌ಬ್ಯಾಡ್ಮಿಂಟನ್ ಎಸೋಸಿಯೇಶನ್ ಆಶ್ರಯದಲ್ಲಿ ನಡೆದ ಅಖಿಲ ಭಾರತ ರಾಜಗೋಪಾಲನ್ ಸ್ಮಾರಕ ಬಾಲ್‌ಬ್ಯಾಡ್ಮಿಂಟನ್ ಚ್ಯಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ತಂಡ ಪ್ರಶಸ್ತಿ ಗೆದ್ದಿತು.
20 ಮಹಿಳಾ ತಂಡಗಳು ಭಾಗವಹಿಸಿದ್ದವು. ಲೀಗ್ ಕಂ ಸೂಪರ್ ಲೀಗ್ ಬೇಸಿಸ್‌ನಲ್ಲಿ ಪಂದ್ಯಾಟ ನಡೆಯಿತು. ಫೈನಲ್ ಲೀಗ್ ಪಂದ್ಯದಲ್ಲಿ ಆಳ್ವಾಸ್ ತಂಡವು ನಿರ್ಮಲಾ ಬಾಲ್‌ಬ್ಯಾಡ್ಮಿಂಟನ್ ಕ್ಲಬ್ ಕೊಯಂಬತ್ತೂರು ತಂಡವನ್ನು 35-23, 32-35, 35-16 ಅಂಕಗಳಿಂದ ಸೋಲಿಸಿತು.
ಸೂಪರ್ ಲೀಗ್ ಪಂದ್ಯದಲ್ಲಿ ಆಳ್ವಾಸ್ ತಂಡವು ಎಲ್‌ಎಸ್‌ಎಸ್ ಮೈಲಾಪುರ್, ಎಸ್‌ಆರ್‌ಎಂ ವಿ.ವಿ. ಚೆನ್ನೈ, ನಿರ್ಮಲಾ ಬಾಲ್‌ಬ್ಯಾಡ್ಮಿಂಟನ್ ಕ್ಲಬ್ ಕೊಯಂಬತ್ತೂರು ತಂಡಗಳನ್ನು ಮಣಿಸಿತು. ನಿರ್ಮಲಾ ತಂಡ ರನ್ನರ್ ಅಪ್ ಗಳಿಸಿತು.
Next Story





