ಪಿಎನ್‌ಬಿ ಹಗರಣ ತನಿಖಾ ವರದಿ ನೀಡಲು ನಿರಾಕರಣೆ

ಹೊಸದಿಲ್ಲಿ, ಮೇ 20: ಹದಿಮೂರು ಸಾವಿರ ಕೋ. ರೂ.ಗೂ ಅಧಿಕ ವಂಚನೆ ಪತ್ತೆಗೆ ಕಾರಣವಾದ ಲೆಕ್ಕಪರಿಶೋಧನೆ ಅಥವಾ ತನಿಖೆಯ ವಿವರ ಬಹಿರಂಗಗೊಳಿಸಲು ಪಂಜಾಬ್ ನ್ಯಾಶನಲ್ ಬ್ಯಾಂಕ್ ನಿರಾಕರಿಸಿದೆ.
ಯಾವುದೇ ವಿಷಯವನ್ನು ಬಹಿರಂಗಪಡಿಸುವುದರಿಂದ ಅಪರಾಧಿಗಳ ಬಂಧನ ಹಾಗೂ ತನಿಖಾ ಪ್ರಕ್ರಿಯೆಗೆ ಅಡ್ಡಿ ಉಂಟಾಗುತ್ತದೆ ಎಂಬ ವಿಧಿಯನ್ನು ಬ್ಯಾಂಕ್ ಉಲ್ಲೇಖಿಸಿದೆ. ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾಗಿರುವ ಮನವಿಗೆ ಬಿಎನ್‌ಬಿ, ಹಗರಣಕ್ಕೆ ಸಂಬಂಧಿಸಿದ ಪರಿಶೀಲನಾ ವರದಿಯ ಪ್ರತಿ ನೀಡಲು ನಿರಾಕರಿಸಿದೆ. ಕೇಂದ್ರ ತನಿಖಾ ಸಂಸ್ಥೆ/ಸಂಸ್ಥೆಗಳು/ಕಾನೂನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ವಿಷಯಗಳ ಬಗ್ಗೆ ಅಗತ್ಯವಿರುವ ಮಾಹಿತಿಗಳನ್ನು ನೀಡುವುದಕ್ಕೆ ಮಾಹಿತಿ ಹಕ್ಕು ಕಾಯ್ದೆ 2005ರ ಪರಿಚ್ಛೇದ 8(1) ಅಡಿಯಲ್ಲಿ ವಿನಾಯತಿ ನೀಡಲಾಗಿದೆ ಎಂದು ದಾಖಲಿಸಲಾದ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಮನವಿಗೆ ಬ್ಯಾಂಕ್ ಪ್ರತಿಕ್ರಿಯೆ ನೀಡಿದೆ.
Next Story





